Sunday, 31 January 2021

'ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ' ಘೋಷಿಸಿದ ವಿತ್ತ ಸಚಿವೆ


 'ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ' ಘೋಷಿಸಿದ ವಿತ್ತ ಸಚಿವೆ

ಹೊಸದಿಲ್ಲಿ : ಇಂದು ಕೇಂದ್ರ ಬಜೆಟ್ 2021 ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ್ ಮಂತ್ರಿ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನಾ ಎಂಬ ಕೇಂದ್ರೀಯ ಪ್ರವರ್ತಿತ ಯೋಜನೆಯನ್ನು ಘೋಷಿಸಿ ಈ ಯೋಜನೆಗಾಗಿ ಮುಂದಿನ ಆರು ವರ್ಷಗಳ ಅವಧಿಗೆ ರೂ. 64,180 ಕೋಟಿ ಮೀಸಲಿರಿಸಿದ್ದಾರೆ.

ಈ ಯೋಜನೆಯ ಭಾಗವಾಗಿ  ದೇಶದ ಎಲ್ಲಾ ಸ್ತರಗಳ ಆರೋಗ್ಯ ಸೇವಾ ವ್ಯವಸ್ಥೆಯ ಸಾಮಥ್ರ್ಯವನ್ನು ಹೆಚ್ಚಿಸುವುದರ ಜತೆಗೆ ಈಗಿರುವ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವುದು ಹಾಗೂ ಹೊಸತಾಗಿ ಕಾಣಿಸುವ ರೋಗಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ  ನೀಡುವ ಹೊಸ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶ ಸರಕಾರಕ್ಕಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‍ಗೆ ಹೆಚ್ಚುವರಿಯಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಕೋವಿಡ್ ನಂತರದ ಪ್ರಸಕ್ತ ಸನ್ನಿವೇಶದಲ್ಲಿ ಆರೋಗ್ಯ ಕ್ಷೇತ್ರದ ಮೂಲಭೂತಸೌಕರ್ಯಗಳಲ್ಲಿ ಹೂಡಿಕೆಯನ್ನು  ಬಹಳಷ್ಟು ಹೆಚ್ಚಿಸಲಾಗಿದೆ ಎಂದೂ ಸಚಿವೆ ಹೇಳಿದರು.

ಕೋವಿಡ್ ಲಸಿಕೆ ಅಭಿಯಾನಕ್ಕಾಗಿ ಸರಕಾರ  2021-2022ರಲ್ಲಿ ರೂ 35,000 ಕೋಟಿ ಒದಗಿಸಲಿದೆ ಹಾಗೂ ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಹಣಕಾಸು ಮೀಸಲಿರಿಸಲಾಗುವುದು ಎಂದು ಅವರು ಹೇಳಿದರು.


SHARE THIS

Author:

0 التعليقات: