Friday, 8 January 2021

'ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್' : ಸ್ಪೀಕರ್ ವಿಚಾರಣೆ ನಡೆಸಲು ಮುಂದಾದ ಕಸ್ಟಮ್ಸ್ ಅಧಿಕಾರಿಗಳು


'ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್' : ಸ್ಪೀಕರ್ ವಿಚಾರಣೆ ನಡೆಸಲು ಮುಂದಾದ ಕಸ್ಟಮ್ಸ್ ಅಧಿಕಾರಿಗಳು

ಡಿಜಿಟಲ್ ಡೆಸ್ಕ್ : ಕೇರಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಸ್ಟಮ್ಸ್ ಅಧಿಕಾರಿಗಳು ಇದೀಗ ಕೇರಳ ವಿಧಾನಸಭೆಯ ಸ್ಪೀಕರ್ ವಿಚಾರಣೆ ನಡೆಸಲು ಮುಂದಾಗಿದೆ.

ಇಂದು ಕಸ್ಟಮ್ಸ್ ಅಧಿಕಾರಿಗಳು ಕೇರಳ ಸ್ಪೀಕರ್ ರಾಮಕೃಷ್ಣನ್ ಅವರ ಆತ್ಮೀಯ ಕೆ ಅಯ್ಯಪ್ಪನ್ ಅವರನ್ನು ವಿಚಾರಣೆಗೆ ಕರೆದಿತ್ತು. ಈ ಹಿಂದೆ ಒಂದೆರಡು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಕೊನೆಗೆ ಇಂದು ವಿಚಾರಣೆ ಹಾಜರಾಗಿದ್ದಾರೆ.

ಕೆ ಅಯ್ಯಪ್ಪನ್ ಸ್ಪೀಕರ್ ಅವರ ಟ್ರಾವೆಲ್ ಡೈರಿ , ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಸ್ಪೀಕರ್ ರಾಮಕೃಷ್ಣನ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ.



SHARE THIS

Author:

0 التعليقات: