Sunday, 24 January 2021

ಆರೋಪಗಳು ಸಾಬೀತಾದರೆ ಸಾರ್ವಜನಿಕವಾಗಿ ನೇಣಿಗೆ ಶರಣಾಗುತ್ತೇನೆ : ಅಭಿಷೇಕ್ ಬ್ಯಾನರ್ಜಿ


ಆರೋಪಗಳು ಸಾಬೀತಾದರೆ ಸಾರ್ವಜನಿಕವಾಗಿ ನೇಣಿಗೆ ಶರಣಾಗುತ್ತೇನೆ : ಅಭಿಷೇಕ್ ಬ್ಯಾನರ್ಜಿ


ಪಶ್ಚಿಮ ಬಂಗಾಳ : ನನ್ನ ಮೇಲಿರುವ ಭ್ರಷ್ಟಾಚಾರಗಳು ಆರೋಪಗಳು ಸಾಬೀತಾದರೆ ಸಾರ್ವಜನಿಕವಾಗಿ ನೇಣಿಗೆ ಶರಣಾಗುತ್ತೇನೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.


ಕುಲ್ತಲಿ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಸಕ್ರಿಯ ರಾಜಕೀಯದಿಂದ ನಿಷೇಧಿಸುವ ಮಸೂದೆಯನ್ನು ಪ್ರಧಾನಿ ಮೋದಿ ಅವರು ಮಂಡಿಸಬೇಕು, ಹೀಗಾದರೆ ಮರು ಕ್ಷಣದಿಂದಲೇ ಬ್ಯಾನರ್ಜಿ ರಾಜಕೀಯದಲ್ಲಿರುವುದಿಲ್ಲ ಎಂದಿದ್ದಾರೆ.


ಇನ್ನೂ, ಬಿಜೆಪಿಯಲ್ಲಿನ ತಮ್ಮ ವಿರೋಧಿಗಳಿಗೆ ಸವಾಲು ಹಾಕಿರುವ ಅವರು 'ನನ್ನ ಮೇಲಿರುವ ಭ್ರಷ್ಟಾಚಾರಗಳು ಆರೋಪಗಳು ಸಾಬೀತಾದರೆ ಸಾರ್ವಜನಿಕವಾಗಿ ನೇಣಿಗೆ ಶರಣಾಗುತ್ತೇನೆ ಎಂದು ಸವಾಲು ಹಾಕಿದ್ದಾರೆ.



SHARE THIS

Author:

0 التعليقات: