Tuesday, 19 January 2021

ಇಂದು ರಾಜ್ಯ ಕಾಂಗ್ರೆಸ್ ನಿಂದ ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ರಾಜಭವನ ಚಲೋ ಚಳುವಳಿ


ಇಂದು ರಾಜ್ಯ ಕಾಂಗ್ರೆಸ್ ನಿಂದ ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ರಾಜಭವನ ಚಲೋ ಚಳುವಳಿ


ಬೆಂಗಳೂರು : ಕೇಂದ್ರ ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಇಂದು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಮುಂದಾಗಿದ್ದು, ಕೆಪಿಸಿಸಿ ವತಿಯಿಂದ ಕಿಸಾನ್ ಅಧಿಕಾರ ದಿವಸ್ ಆಚರಣೆ ಮಾಡುವ ಮೂಲಕ ಬೃಹತ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರಾಯಣ್ಣ ಪ್ರತಿಮೆ ಬಳಿಯಿಂದ ರ್ಯಾಲಿ ಆರಂಭವಾಗಿ ಫ್ರೀಡಂ ಪಾರ್ಕ್ ಮಾರ್ಗವಾಗಿ ರಾಜಭವನ ತಲುಪಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಸ್ನಾನದ ಚಳುವಳಿ ಮೂಲಕ ರಾಜಭವನ ಚಲೋ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮೊದಲಿಗೆ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಸಿಲಿಂಡರ್ ದರ ಏರಿಕೆ ಖಂಡಿಸಿ ಬೆಳಗ್ಗೆ 8 ಗಂಟೆ 30 ನಿಮಿಷಕ್ಕೆ ಒಲೆ ಹಚ್ಚುವ ಚಳುವಳಿ ನಡೆಸಲಿದ್ದಾರೆ. ನಂತರ ರಸ್ತೆಯಲ್ಲೇ ಅಡುಗೆ ತಯಾರಿಸಿ ಉಪಾಹಾರ ಸೇವಿಸಲಿದ್ದಾರೆ.

ಇನ್ನು ಪ್ರತಿಭಟನೆ ವೇಳೆ ರೈತರಿಗೆ ಎಳನೀರು ಕುಡಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಭವನ ಚಲೋಗೆ ಚಾಲನೆ ನೀಡಲಿದ್ದಾರೆ. 10.30 ಕ್ಕೆ ಫ್ರೀಡಂ ಪಾರ್ಕ್ ನತ್ತ ರ್ಯಾಲಿ ಹೊರಡಲಿದೆ.SHARE THIS

Author:

0 التعليقات: