ವಾಟ್ಸಾಪ್ ಬಳಕೆ ಬಗ್ಗೆ ʼದೆಹಲಿ ಹೈಕೋರ್ಟ್ʼನಿಂದ ಮಹತ್ವದ ಮಾಹಿತಿ
ನವದೆಹಲಿ: ವಾಟ್ಸಾಪ್ ಒಂದು ಖಾಸಗಿ ಆಪ್ ಆಗಿದ್ದು, ಯಾರಿಗಾದರೂ ಸಮಸ್ಯೆ ಇದ್ದರೆ ಅದನ್ನು ತಮ್ಮ ಫೋನ್ʼನಿಂದ ತೆಗೆದುಹಾಕಬಹುದು ಎಂದು ದೆಹಲಿ ಕೋರ್ಟ್ ಸೋಮವಾರ ಹೇಳಿದೆ. ವಾಟ್ಸ್ ಆಪ್ ಮಾತ್ರವಲ್ಲ, ಎಲ್ಲಾ ಅಪ್ಲಿಕೇಶನ್ʼಗಳು ತಮ್ಮ ಬಳಕೆದಾರರಿಂದ ಮಾಹಿತಿ ಪಡೆಯುತ್ತವೆ ಎಂದು ಕೋರ್ಟ್ ಹೇಳಿದೆ.
ವಾಟ್ಸಾಪ್ʼನ ಹೊಸ ಪರಿಷ್ಕೃತ ನೀತಿಯನ್ನ ಪ್ರಶ್ನಿಸಿ ವಕೀಲ ಚಿರಾಗ್ ರೊಹಿಲ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಸಚ್ ದೇವ ಅವರು ನೋಟಿಸ್ ನೀಡಲು ನಿರಾಕರಿಸಿದ್ದಾರೆ. ಕಾಲಾವಕಾಶ ದಯಪಾಲದ ಕಾರಣ ನ್ಯಾಯಾಲಯ ವಿಚಾರಣೆಯನ್ನ ಜನವರಿ 25ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಅವರ ಪರ ವಕೀಲ ಮನೋಹರ್ ಲಾಲ್ ಅವರು ತಮ್ಮ ಮೇಲಿನ ಆರೋಪ ಮತ್ತು ಅವರು ಎತ್ತಿರುವ ಸಮಸ್ಯೆಗಳ ಬಗ್ಗೆ ವಾಟ್ಸ್ ಆಯಪ್ʼನಿಂದ ಪ್ರತಿಕ್ರಿಯೆ ಪಡೆಯುವಂತೆ ಮನವಿ ಮಾಡಿದರು. ಆದರೆ, ಅರ್ಜಿದಾರರು ಸಮಸ್ಯೆ ಇದ್ದರೆ ಬೇರೆ ಯಾವುದಾದರೂ ಅರ್ಜಿಗೆ ಬದಲಾಯಿಸಬಹುದು ಎಂದು ಕೋರ್ಟ್ ಹೇಳಿದೆ.
ವಾಟ್ಸಾಪ್ ಪರವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಕಳೆದ ಐದು ವರ್ಷಗಳಿಂದ ಖಾಸಗಿ ವ್ಯಕ್ತಿಗಳ ಪಾಲಿಸಿಯಂತೆಯೇ ಇದೆ. ವ್ಯವಹಾರ ಖಾತೆಗಳಿಗೆ ಸಂಬಂಧಿಸಿದಂತೆ ಮಾತ್ರ ನೀತಿಯನ್ನು ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪರಿಷ್ಕೃತ ನೀತಿಯು ಬಳಕೆದಾರರ ವೈಯಕ್ತಿಕ ಪ್ರೊಫೈಲ್ ಅನ್ನ ವಾಸ್ತವಿಕವಾಗಿ ಪರಿಶೀಲಿಸುತ್ತದೆ, ಇದು ವ್ಯಕ್ತಿಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
0 التعليقات: