Thursday, 7 January 2021

ಸಿದ್ಧರಾಮಯ್ಯ ಯಾವಾಗ ಜ್ಯೋತಿಷಿಯಾದ್ರು? ನನಗೂ ಗೊತ್ತಿಲ್ಲ : ಬೈರತಿ ಬಸವರಾಜ್


ಸಿದ್ಧರಾಮಯ್ಯ ಯಾವಾಗ ಜ್ಯೋತಿಷಿಯಾದ್ರು? ನನಗೂ ಗೊತ್ತಿಲ್ಲ : ಬೈರತಿ ಬಸವರಾಜ್


ಹುಬ್ಬಳ್ಳಿ: ಸಿದ್ಧರಾಮಯ್ಯ ಯಾವಾಗ ಜ್ಯೋತಿಷಿ ಆದ್ರು? ಅದು ನನಗೂ ಗೊತ್ತಿಲ್ಲ. ಆದ್ರೆ, ಮುಖ್ಯಮಂತ್ರಿ ಬದಲಾವಣೆ ಅನ್ನೋದು ಆಸಾಧ್ಯವಾದ ಮಾತು. ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರ್ತಾರೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.


ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, 'ಡಿ.ಕೆ ಶಿವಕುಮಾರ್‌ ಅವ್ರು ಕಾಂಗ್ರೆಸ್ ಬಿಟ್ಟು ಹೋದವರು ಮರಳಿ ಬರ್ತಾರೆ ಅಂತಾ ಹೇಳಿದ್ದಾರೆ. ಅದು ಅವರ ಭ್ರಮೆ, ನಾವು ಯಾರೂ ಮರಳಿ ಕಾಂಗ್ರೆಸ್​ಗೆ ಹೋಗಲ್ಲ. ಬಿಜೆಪಿಯ ತತ್ವ ಸಿದ್ಧಾಂತಗಳನ್ನ ಒಪ್ಪಿ ನಾವೆಲ್ಲ ಬಿಜೆಪಿ ಸೇರಿದ್ದೇವೆ. ಜೀವನ ಪರ್ಯಂತ ಬಿಜೆಪಿಯಲ್ಲೇ ಇರುತ್ತೇವೆ' ಎಂದರು.

SHARE THIS

Author:

0 التعليقات: