ಬೆಳ್ಳಿಪ್ಪಾಡಿ ಉಸ್ತಾದರಿಗೆ ಕಣ್ಣೀರಿನೊಂದಿಗೆ ವಿದಾಯ, ಮುಹಿಮ್ಮಾತಿನಲ್ಲಿ ಅಂತ್ಯ ವಿಶ್ರಾಂತಿ
ಕಾಸರಗೋಡು: ನಿನ್ನೆ ಮರಣ ಹೊಂದಿದ ಪ್ರಮುಖ ವಿದ್ವಾಂಸ ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ರವರಿಗೆ ಸಹಸ್ರಾರು ಜನರು ತುಂಬಿದ ಕಣ್ಣುಗಳಿಂದ ವಿದಾಯ ಹೇಳಿದರು. ಅವರ ಅಂತಿಮ ಅಭಿಲಾಷೆಯಂತೆ ದೀರ್ಘಕಾಲ ಪ್ರಧಾನ ಮುದರಿಸರಾಗಿ ಸೇವೆ ಸಲ್ಲಿಸಿದ ಮುಹಿಮ್ಮಾತಿನ ವಠಾರದಲ್ಲಿ ದಫನ ಮಾಡಲಾಯಿತು.
ಮಯ್ಯಿತ್ ನಮಾಜಿಗೆ ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ಕೇಂದ್ರ ಮಶಾವರ ಸದಸ್ಯರಾದ ಕೆ ಎಸ್ ಆಟಕೋಯ ತಂಙಳ್ ನೇತೃತ್ವ ನೀಡಿದರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಸಯ್ಯಿದ್ ಇಬ್ರಾಹೀಮ್ ಅಲ್ ಹಾದೀ ತಂಙಳ್ ಚೂರಿ, ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಶಿಹಾಬುದ್ದೀನ್ ಜಮಲುಲ್ಲೈಲಿ ತಂಙಳ್ ಕಾಟುಕುಕ್ಕೆ, ಸಯ್ಯಿದ್ ಅಹ್ಮದ್ ಕಬೀರ್ ಜಮಲುಲ್ಲೈಲಿ ತಂಙಳ್ ಕರ, ಸಯ್ಯಿದ್ ಆಟಕೋಯ ತಂಙಳ್ ಆದೂರು, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಬಿ ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಸುಲೈಮಾನ್ ಕರಿವಲ್ಲೂರ್, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಅಬ್ದುಲ್ ರಹ್ಮಾನ್ ಅಹ್ಸನಿ, ಮುಹಮ್ಮದ್ ಸಖಾಫಿ ಪಾತ್ತೂರು, ಅಬ್ದುಸ್ಸಲಾಮ್ ದಾರಿಮಿ ಕುಬನೂರು, ಮೊಯಿದು ಸಅದಿ ಚೇರೂರು, ಮೂಸಲ್ ಮದನಿ ತಲಕ್ಕಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್, ಉಮರ್ ಸಖಾಫಿ ಕರ್ನೂರ್, ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ, ರಫೀಕ್ ಸಅದಿ ದೇಲಂಪಾಡಿ, ಎಂ ಪಿ ಅಬ್ದುಲ್ಲಾ ಫೈಝಿ, ಇಬ್ರಿಹಿ ದಾರೀಮಿ ಗುಣಾಜೆ, ಕಂದಲ್ ಸೂಫಿ ಮದನಿ, ಕಾಸಿಂ ಮದನಿ ಕರಾಯ, ಝಕರಿಯ್ಯಾ ಫೈಝಿ, ಅಬ್ಬಾಸ್ ಸಖಾಫಿ ಚೇರೂರ್, ಬಶೀರ್ ಸಖಾಫಿ ಕೊಲ್ಯ, ಹಾಜಿ ಅಮೀರಲಿ ಚೂರಿ, ಜಬ್ಬಾರ್ ಹಾಜಿ ನಿಲ್ಲಿಪ್ಪಾಡಿ, ಅಬ್ಬಾಸ್ ಹಾಜಿ ಕೊಡಿಯಮ್ಮ, ಉನೈಸ್ ಬೆಳ್ಳಿಪ್ಪಾಡಿ, ಹಮೀದ್ ಫೈಝಿ ಆದೂರ್ ಮುಂತಾದವರು ಭಾಗವಹಿಸಿದರು.
ನಿನ್ನೆ ಕಾಸರಗೋಡು ತಳಂಗರ ಮಾಲಿಕ್ ದೀನಾರಲ್ಲಿ ನಡೆದ ಮಯ್ಯಿತ್ ನಮಾಝಿಗೆ ಕಾಸರಗೋಡು ಸಂಯುಕ್ತ ಜಮಾಅತ್ ಖಾಝೀ ಆಲಿಕುಟ್ಟಿ ಮುಸ್ಲಿಯಾರ್, ಮನೆಯಲ್ಲಿ ನಡೆದ ಮಯ್ಯಿತ್ ನಮಾಝಿಗೆ ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿರುವ ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೊತ್ ನೇತೃತ್ವ ವಹಿಸಿದರು.
0 التعليقات: