ಶಿವಮೊಗ್ಗದ ಸ್ಪೋಟ ಪ್ರಕರಣದ ಬಳಿಕ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ; ಅಕ್ರಮ ಕಲ್ಲು ಗಣಿಕಾರಿಕೆ ವಿರುದ್ಧ ಸಮರ ಸಾರಲು ಸಜ್ಜು
ಮಂಡ್ಯ(ಜ.24): ರಾಜ್ಯದ ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣ ರಾಜ್ಯದಲ್ಲಿ ಇದೀಗ ಸಾಕಷ್ಟು ಸದ್ದು ಮಾಡ್ತಿದೆ. ಈ ಪ್ರಕರಣದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಅಪಾರ ಪ್ರಮಾಣದ ಅಪಾಯಕಾರಿ ಸ್ಫೋಟಕಗಳು ಕ್ವಾರೆಗಳಲ್ಲಿ ಅನಧಿಕೃತವಾಗಿ ರಾಜ್ಯದಲ್ಲಿ ಬಳಕೆಯಾಗ್ತಿದೆ ಎನ್ನುವ ಸತ್ಯ ಗೊತ್ತಾಗಿದೆ. ಇದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರಕ್ಕೆ ಅನಧಿಕೃತ ಕಲ್ಲುಗಣಿಗಾರಿಕೆ ಬಗ್ಗೆ ಜ್ಞಾನೋದಯವಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನಧಿಕೃತ ಕ್ಚಾರೆಗಳ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆ ಮಂಡ್ಯ ಜಿಲ್ಲೆಯಲ್ಲೂ ಕೂಡ ಜಿಲ್ಲಾಡಳಿತ ಎಚ್ಚೆತ್ತುಕೊಂಡು ದಾಳಿಗೆ ಮುಂದಾದರೆ, ಜನಪ್ರತಿನಿಧಿಗಳು ಜಿಲ್ಲಾಡಳಿತದ ವಿರುದ್ದ ತಿರುಗಿ ಬಿದ್ದಿದ್ದಾರೆ.
ಹೌದು! ರಾಜ್ಯದ ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣ ಇದೀಗ ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಈ ಪ್ರಕರಣದಲ್ಲಿ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಅಪಾರ ಪ್ರಮಾಣದ ಸ್ಫೋಟಕ ಬಳಕೆಯಾಗಿರೋದು ಆತಂಕ ತಂದಿದೆ. ಈ ಪ್ರಕರಣದಲ್ಲಿ ಸ್ಫೋಟಕ ವಸ್ತು ಬಳಕೆ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದರೆ, ಆಯಾ ಜಿಲ್ಲಾಡಳಿತಗಳು ಕ್ರಮಕ್ಕೆ ಮುಂದಾಗಿವೆ. ಅದ್ರಲ್ಲೂ ರಾಜ್ಯದಲ್ಲಿ ಅತಿ ಹೆಚ್ಚಿನ ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣದಲ್ಲಿ ಸುದ್ದಿಯಾಗ್ತಿದ್ದ ಮಂಡ್ಯ ಜಿಲ್ಲೆಯ ಮೇಲೂ ಪರಿಣಾಮ ಬೀರಿದೆ. ಇದೀಗ ಶಿವಮೊಗ್ಗದ ಆ ಪ್ರಕರಣ ಮಂಡ್ಯ ಜಿಲ್ಲೆಯ ಕಲ್ಲುಗಣಿಗಾರಿಕೆಯಲ್ಲಿ ಅನಧಿಕೃತವಾಗಿ ಅಪಾರ ಪ್ರಮಾಣದ ಸ್ಫೋಟಕ ಬಳಕೆಯಾಗ್ತಿದೆ. ಜಿಲ್ಲೆಯ ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಮದ್ದೂರು ತಾಲೂಕಿನ ಹಲವೆಡೆ ಅಕ್ರಮವಾಗಿ ಎಗ್ಗಿಲ್ಲದೆ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅದ್ರಲ್ಲೂ ಪಾಂಡವಪುರದ ಬೇಬಿ ಬೆಟ್ಟ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅಕ್ರಮ ಕಲ್ಲುಗಣಿಗಾರಿಕೆ ಜಿಲ್ಲೆಯ ಜೀವನಾಡಿ KRSಡ್ಯಾಂಗೆ ಆತಂಕ ತಂದಿದೆ. ಇಷ್ಟಾದ್ರು ಇಲ್ಲಿನ ಅಕ್ರಮ ಗಣಿಗಾರಿಕೆ ಪ್ರಭಾವಿಗಳಿಂದ ನಡೆಯುತ್ತಿದೆ. ಜಿಲ್ಲೆಯ ಅಕ್ರಮ ಗಣಿಗಾರಿಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಕಿರೇಸೂರು ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮೂವರಲ್ಲಿ ಇಬ್ಬರ ಮೃತದೇಹ ಪತ್ತೆ..!
ಇನ್ನು ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯಿಂದ ಸಾಕಷ್ಟು ಹಾನಿಯಾಗ್ತಿದೆ. ಪರಿಸರ ಸೇರಿದಂತೆ ಜನ ಜೀವನದ ಮೇಲೂ ಕಲ್ಲು ಗಣಿಗಾರಿಕೆ ಪ್ರತಿಕೂಲ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಯಿಂದ ಸೂಕ್ಷ್ಮ ವಲಯಗಳೆಂದು ಗುರುತಿಸಲ್ಪಟ್ಟ, ರಂಗನತಿಟ್ಟು,ಕೊಕ್ಕರೆ ಬೆಳ್ಳೂರು, ಮಯೂರ ವನದಂತ ಪಕ್ಷಿಧಾಮಗಳಿಗೂ ಕಂಟಕ ಎದುರಾಗಿದೆ. ಇದರ ಜೊತೆಗೆ ಜಿಲ್ಲೆಯ ಹಲವು ಕಡೆ ಅರಣ್ಯ ವಲಯಗಳು ಕೂಡ ನಶಿಸಿ ಹೋ ಗ್ತಿವೆ ಎಂದು ಪರಿಸರವಾದಿ ಹಾಗೂ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಇಷ್ಟೆಲ್ಲಾ ಅ ಕ್ರಮ ಗಣಿಗಾರಿಕೆಯ ಹಿಂದೆ ಜಿಲ್ಲಾಡಳಿತ ವೈಫಲ್ಯದ ಜೊತೆ ಅಧಿಕಾರಿಗಳ ಕುಮ್ಮಕು ಇದೆ ಅಂತಾ ಜಿಲ್ಲೆಯ ಜನ ಪ್ರತಿನಿಧಿ ಶಾಸ ಕರು ಜಿಲ್ಲಾಡಳಿತದ ಮತ್ತು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಇದು ಜಿಲ್ಲೆಯಲ್ಲಿ ದಂಧೆಯಾಗಿ ಪರಿಣಮಿಸಿದ್ದು ಕ್ವಾರೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳು ಅನಧಿಕೃತವಾಗಿ ಬಳಕೆಯಾಗ್ತಿರೋದಾಗಿ ಆರೋಪಿಸಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.
ಇನ್ನು ಶಿವಮೊಗ್ಗದ ಈ ಪ್ರಕರಣ ಗಂಭೀರವಾಗಿ ರಾಜ್ಯ ದಲ್ಲಿ ಸುದ್ದಿಯಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲೂ ಕ ಡ ಜಿಲ್ಲಾಡಳಿತ ಎಚ್ಚೆತ್ತಿದೆ.ಜಿಲ್ಲೆಯ ಗಣಿ ಇಲಾಖೆ ಸೇರಿತಾಲೂಕು ಆಡಳಿತ ಅಧಿಕಾರಿಗಳು ಜಿಲ್ಲೆಯಲ್ಲಿರೋ ಅನಧಿಕೃತ ಕಲ್ಲು ಕ್ವಾರೆಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಅಲ್ಲದೇ 20 ಕ್ಕೂ ಹೆಚ್ಚುಕಡಿಮೆ ಕ್ರಷರ್ ಗಳಿಗೆ ಬೀಗ ಜಡಿ ದು ಸ್ಫೋಟಕಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮಾಲೀಕರಿಗೆ ನೋಟೀಸ್ ನೀಡಿದ್ದಾರೆ.
ಒಟ್ಟಾರೆ ಶಿವಮೊಗ್ಗದ ಸ್ಫೋಟ ಪ್ರಕರಣ ಇದೀಗ ಮಂಡ್ಯ ಜಿಲ್ಲೆಯಲ್ಲೂ ಪರಿಣಾಮ ಬೀರಿದೆ. ಅದ್ರಲ್ಲೂ ಅಕ್ರಮ ಗಣಿಗಾರಿಕೆ ಮೇಲೆ ಇದೀಗ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಂಡು ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಈಗಲಾದರೂ ಜಿಲ್ಲೆಯಲ್ಲಿ ನಡೆಯುತ್ತಿರೋ ಈ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
0 التعليقات: