ನಾನು ಯಾವಾಗ ಇಳಿಯುತ್ತೇವೆ ಎಂದು ಸಿದ್ದರಾಮಯ್ಯನವರೇ ಹೇಳಲಿ: ಬಿಎಸ್ ವೈ
ಮೈಸೂರು: ನಾನು ಯಾವಾಗ ಕೆಳಗೆ ಇಳಿಯುತ್ತೇನೆ ಎಂಬುದನ್ನು ಸಿದ್ದರಾಮಯ್ಯನವರೇ ಹೇಳಲಿ. ನೀವು ಅವರು ಇಬ್ಬರು ಕುಳಿತು ದಿನಾಂಕ ನಿಗದಿಪಡಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸುದ್ದಿಗಾರರಿಗೆ ಹೇಳಿದರು.
ಮೈಸೂರಿನ ಸುತ್ತೂರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ನಾನು ಯಾವಾಗ ಇಳಿಯುತ್ತೇವೆ ಎಂಬುದನ್ನು ಸಿದ್ದರಾಮಯ್ಯನವರೇ ಹೇಳಲಿ. ನೀವು ಅವರು ಇಬ್ಬರು ಕುಳಿತು ದಿನಾಂಕ ನಿಗದಿಪಡಿಸಿ ಎಂದು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಜ.13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆ ನಿಶ್ವಿತ. ಅದು ಪುನರ್ ರಚನೆಯೋ ಅಥವ ವಿಸ್ತರಣೆಯೋ ಎಂದು ಅವತ್ತಿಗೆ ಗೊತ್ತಾಗಲಿದೆ. 13 ರ ಮಧ್ಯಾಹ್ನ ಅಮಾವಾಸ್ಯೆ ಕಳೆಯುತ್ತದೆ. ನಂತರ ಒಳ್ಳೆಯ ಸಮಯ ಇದೆ ಎಂದು ಹೇಳಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಸಮಯ ಕೇಳಿಕೊಂಡು ನಿಮಗೂ ಸಮಯ ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
0 التعليقات: