Wednesday, 6 January 2021

ಅಮೆರಿಕಾದಲ್ಲಿ ಹಿಂಸಾಚಾರಕ್ಕೆ ಡೊನಾಲ್ಡ್ ಟ್ರಂಪ್ ಕಾರಣ : ಮಾಜಿ ಅಧ್ಯಕ್ಷ ಒಬಾಮ ಆರೋಪ


 ಅಮೆರಿಕಾದಲ್ಲಿ ಹಿಂಸಾಚಾರಕ್ಕೆ ಡೊನಾಲ್ಡ್ ಟ್ರಂಪ್ ಕಾರಣ : ಮಾಜಿ ಅಧ್ಯಕ್ಷ ಒಬಾಮ ಆರೋಪ

ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್ ಗೆ ಮುತ್ತಿಗೆ ಹಾಕಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದ ಘಟನೆಯನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಖಂಡಿಸಿದ್ದಾರೆ.

ಅಮೆರಿಕದ ಹಿಂಸಾಚಾರಕ್ಕೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕನ್ನರು ಕಾರಣ. ಈ ಘಟನೆಯನ್ನು ನಮ್ಮ ದೇಶಕ್ಕೆ ಅತಿ ದೊಡ್ಡ ಅಗೌರವ ಹಾಗೂ ನಾಚಿಕೆಗೇಡಿನ ಸಂಗತಿ. ಕಾನೂನು ಬದ್ಧ ಚುನಾವಣೆಯಿಂದ ಹೊರಬಂದ ಫಲಿತಾಂಶದ ವಿರುದ್ಧ ಆಧಾರರಹಿತ ಸುಳ್ಳುಗಳನ್ನು ಆರೋಪಿಸುವುದನ್ನು ಮುಂದುವರಿಸಿರುವ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.


SHARE THIS

Author:

0 التعليقات: