Thursday, 21 January 2021

ಲಸಿಕೆ ತಯಾರಕ ಘಟಕ ಸೀರಮ್ ಕಟ್ಟಡದಲ್ಲಿ ಅಗ್ನಿ ಅವಘಡ : ಐವರು ಸಾವು


ಲಸಿಕೆ ತಯಾರಕ ಘಟಕ ಸೀರಮ್ ಕಟ್ಟಡದಲ್ಲಿ ಅಗ್ನಿ ಅವಘಡ : ಐವರು ಸಾವು

ಪುಣೆ : ಕೋವಿಶೀಲ್ಡ್ ಕೊರೋನಾ ಲಸಿಕೆ ತಯಾರಿಕೆಯಲ್ಲಿ ನಿರತವಾಗಿರುವ ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾದಲ್ಲಿ ಇದೀಗ ಅಗ್ನಿ ಅವಘಡ ಉಂಟಾಗಿದ್ದು , ಈ ದುರಂತದಲ್ಲಿ 5 ಮಂದಿ ಅಸುನಿಗಿದ್ದಾರೆ .

ಘಟನೆ ಬಗ್ಗೆ ಸಿಇಒ ಆದಾರ್ ಪೂನಾವಾಲಾ ವಿಷಾದ ವ್ಯಕ್ತಪಡಿಸಿದ್ದು, ದುರ್ಘಟನೆಯಲ್ಲಿ ಕೆಲವು ಪ್ರಾಣಹಾನಿ ಸಂಭವಿಸಿದೆ ಎಂದು ಹೇಳಿದ್ದಾರೆ. ಘಟನೆಯಿಂದ ನಾವು ಬಹಳ ದುಃಖಿತರಾಗಿದ್ದೇವೆ ಮತ್ತು ಅಗಲಿದವರ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕೋವಿಶೀಲ್ಡ್ ಲಸಿಕೆ ತಯಾರಿಸುತ್ತಿರೋ ಸಂಸ್ಥೆಯ 2ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದ್ರಲ್ಲಿ ಕೆಲಸ ಮಾಡ್ತಿದ್ದ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇದ್ರಲ್ಲಿ 5 ಶವಗಳು ಪತ್ತೆಯಾಗಿದ್ದು, ನಾಲ್ಕು ಜನ ಪುರುಷರು ಒಬ್ಬ ಮಹಿಳೆ ಎನ್ನುವ ಮಾಹಿತಿ ಸಿಕ್ಕಿದೆ.



SHARE THIS

Author:

0 التعليقات: