Sunday, 24 January 2021

ತಮಿಳಿಗರಿಗೆ ಅಗೌರವ ತೋರಲು ಮೋದಿ ಮತ್ತು ಬಿಜೆಪಿಗೆ ಅವಕಾಶ ನೀಡಲ್ಲ: ರಾಹುಲ್ ಗಾಂಧಿ


 ತಮಿಳಿಗರಿಗೆ ಅಗೌರವ ತೋರಲು ಮೋದಿ ಮತ್ತು ಬಿಜೆಪಿಗೆ ಅವಕಾಶ ನೀಡಲ್ಲ: ರಾಹುಲ್ ಗಾಂಧಿ

ಈರೋಡ್: ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ, ಇದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಕಾರ್ಯಕ್ರಮ ಆರಂಭಿಸಿದ್ದಾರೆ.

ಈರೋಡ್ ನಲ್ಲಿ ಪಕ್ಷದ ಕಾರ್ಯಕ್ರಮ ಸಭೆ ಉದ್ಘಾಟಿಸಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಸಂಸ್ಕೃತಿ ಮತ್ತು ಭಾಷೆಯನ್ನು ಅವಮಾನಿಸುತ್ತಿದ್ದಾರೆ, ಅದಾರೆ ನಾನು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ತಮಿಳು ಭಾಷೆ ಮತ್ತು ಸಂಸ್ಕೃತಿ ಮೇಲೆ ಸ್ವಲ್ಪವೂ ಗೌರವವಿಲ್ಲ, ತಮಿಳಿಗರಿಗೆ ಅಗೌರವ ತೋರಲು ನಾನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಡೆಮೋನಿಟೈಸೇಶನ್, ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮತ್ತು ಇಂಧನ ಬೆಲೆ ಏರಿಕೆ ತಮಿಳುನಾಡಿನ ಜನರನ್ನು ದುರ್ಬಲಗೊಳಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶವು ಐದು ಅಥವಾ ಆರು ಉದ್ಯಮಿಗಳ ಕೈಯಲ್ಲಿದೆ (ಮತ್ತು) ಅವರು ರಾಜ್ಯ ಸರ್ಕಾರವನ್ನು ನಿಯಂತ್ರಿಸಿದರೆ ತಮಿಳು ಜನರನ್ನು ನಿಯಂತ್ರಿಸಬಹುದು ಎಂದು ಭಾವಿಸಿದ್ದಾರೆ, ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ರಾಹುಲ್ ಕಿಡಿ ಕಾರಿದ್ದಾರೆ.

"ತಮಿಳು ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ ಎಂದು ಇತಿಹಾಸವು ತೋರಿಸುತ್ತದೆ" ಎಂದ ಅವರು ತಮ್ಮ ತಂದೆ ತಮಿಳುನಾಡು ಜನತೆಯೊಂದಿಗೆ ಹೊಂದಿದ್ದ ಸಂಬಂಧವನ್ನು ಸ್ಮರಿಸಿಕೊಂಡರು. 1991 ರಲ್ಲಿ ಚೆನ್ನ ಸಮೀಪದ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು.


SHARE THIS

Author:

0 التعليقات: