Wednesday, 13 January 2021

ಅಬ್ದುನ್ನಾಸರ್ ಮಅದನಿಯವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ಬೇಕಾದ ಸಹಾಯ ಮಾಡುವೆನು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್


ಅಬ್ದುನ್ನಾಸರ್ ಮಅದನಿಯವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ಬೇಕಾದ ಸಹಾಯ ಮಾಡುವೆನು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್    

ಕಲ್ಲಿಕ್ಕೋಟೆ: ಅಬ್ದುನ್ನಾಸರ್ ಮಅದನಿಯವರ ಆರೋಗ್ಯ ಸ್ಥಿತಿ ಬಹಳ ಕ್ಷೀಣಿಸುತ್ತಿರುವುದರಿಂದ ಕರ್ನಾಟಕ ಮುಖ್ಯಮಂತ್ರಿಯವರನ್ನು  ಭೇಟಿಯಾಗಿ ಈ ವಿಷಯವನ್ನು ಎಚ್ಚರಿಸಲು ಪತ್ಯೇಕ ರಾಯಭಾರೀಯನ್ನು ನೇಮಿಸಲಾಗಿದೆ ಎಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಕೇರಳ ಮುಖ್ಯಮಂತ್ರಿಯವರೊಂದಿಗೂ ಈ ವಿಷಯದ ಬಗ್ಗೆ ಮಾತನಾಡುವೆ ಎಂದು ಅವರು ಹೇಳಿದರು.

ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ವಿಚಾರಣಾ ಕೈದಿಯಾಗಿ ಬಂಧಿಯಾಗಿರುವ ಅಬ್ದುನ್ನಾಸರ್ ಮಅದನಿಯವರಿಗಾಗಿ ಈಗಾಗಲೇ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಿದ್ದೇನೆ. ಕಳೆದ ಬಾರಿ ಈ ವಿಷಯವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಂದಿಗೆ ಖುದ್ದಾಗಿ ಚರ್ಚಿಸಿದ್ದೆ.

ಸರಿಯಾದ ಚಿಕಿತ್ಸೆ ಖಚಿತಪಡಿಸಲು ಮತ್ತು ಅಗತ್ಯವಿದ್ದಲ್ಲಿ ಕೇರಳದಲ್ಲೇ ಚಿಕಿತ್ಸೆ ಕೊಡಿಸಲು ಬೇಕಾಗಿ ಸಹಾಯ ಮಾಡಬೇಕೆಂದು ವಿನಂತಿಸುತ್ತಾ ಅಲ್ ಅನ್ವರ್ ಜಸ್ಟೀಸ್ ಏನ್ಡ್ ವೆಲ್ಫಯರ್ ಅಸೋಸಿಯೇಷನ್ ಪ್ರತಿನಿಧಿಗಳು ಭೇಟಿಯಾದರು. ಬೆಳಿಗ್ಗೆ ಪಿಡಿಪಿ ಪ್ರತಿನಿಧಿಗಳು ಕೂಡ ಬಂದು ಈ ವಿಷಯದ ಬಗ್ಗೆ ಚರ್ಚಿಸಿದರು.  

ಮಅದನಿಯವರ ಆರೋಗ್ಯ ಸುಧಾರಿಸಲು ಮತ್ತು ಕಾನೂನು ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕೆಂದು ಎಲ್ಲರೂ ಪ್ರಾರ್ಥಿಸಬೇಕು ಎಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.


SHARE THIS

Author:

0 التعليقات: