Sunday, 3 January 2021

ಕೊರೊನಾ ಸೋಂಕಿಗೆ ಸ್ಯಾಂಡಲ್ವುಡ್ ಹಿರಿಯ ನಟ 'ಶನಿ ಮಹಾದೇವಪ್ಪ' ವಿಧಿವಶ


ಕೊರೊನಾ ಸೋಂಕಿಗೆ ಸ್ಯಾಂಡಲ್ವುಡ್ ಹಿರಿಯ ನಟ 'ಶನಿ ಮಹಾದೇವಪ್ಪ' ವಿಧಿವಶ


ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶನಿ ಮಹದೇವಪ್ಪ (90) ಇಂದು ನಿಧನರಾಗಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಶನಿ ಮಹದೇವಪ್ಪ ನಗರದ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಹಿರಿಯ ನಟ ಕೊನೆಯುಸಿರೆಳೆದಿದ್ದಾರೆ.


ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಡಾ.ರಾಜ್ ಕುಮಾರ್ ಜೊತೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಒಟ್ಟಾರೆ ತಮ್ಮ 550 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಅವರು ವಿಧಿ ವಶರಾಗಿದ್ದು, ನಾಳೆ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಕವಿರತ್ನ ಕಾಳಿದಾಸ ಸಿನಿಮಾದ ಡಿಂಡಿಮ ಕವಿ ಪಾತ್ರದಲ್ಲಿ ಅಭಿನಯಿಸಿದ್ದ ಶನಿ ಮಹಾದೇವಪ್ಪ ಅವರು ಡಿಂಡಿಮ ಕವಿ ಎಂದೇ ಫೇಮಸ್ ಆಗಿದ್ದರು.SHARE THIS

Author:

0 التعليقات: