Sunday, 24 January 2021

ಎಸ್.ಆರ್.ಟಿ.ಸಿ-ಕಾರು ಡಿಕ್ಕಿಯಾಗಿ ೪ ಸಾವು; ಗಾಯಾಳುಗಳಿಗೆ ಸಚಿವ ನಿರಾಣಿ ನೆರವು



ಎಸ್.ಆರ್.ಟಿ.ಸಿ-ಕಾರು ಡಿಕ್ಕಿಯಾಗಿ ೪ ಸಾವು; ಗಾಯಾಳುಗಳಿಗೆ ಸಚಿವ ನಿರಾಣಿ ನೆರವು

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟ ಭೀಕರ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಸಮೀಪ ಭಾನುವಾರ ಸಂಭವಿಸಿದೆ.

ಯರಗಟ್ಟಿಯಿಂದ ಬೆಳಗಾವಿಯತ್ತ ಬರುತ್ತಿದ್ದ ಕಾರಿಗೆ ಬೆಳಗಾವಿಯಿಂದ ಯರಗಟ್ಟಿಗೆ ಹೊರಟಿದ್ದ ರ‍್ಕಾರಿ ಬಸ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು ಕ್ರೇನ್ ಮೂಲಕ ಕಾರನ್ನು ಹೊರತೆಗೆವ ಕೆಲಸ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ.

ಬೆಳಗಾವಿಯಿಂದ ಬಾಗಲಕೋಟೆಗೆ ಹೊರಟಿದ್ದ ಸಚಿವ ಮುರುಗೇಶ್ ನಿರಾಣಿ ಅಪಘಾತದ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದ್ದಾರೆ.

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ರಕ್ಷಣಾ ಕರ‍್ಯದಲ್ಲಿ ತೊಡಗಿದ್ದಾರೆ.



SHARE THIS

Author:

0 التعليقات: