ಗಣರಾಜ್ಯೋತ್ಸವದಂದು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಶುಭಾರಂಭ- ಹೀಗಿರಲಿದೆ ಕಟ್ಟಡ
ಲಖನೌ: ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದೊರೆತಿರುವ ಐದು ಎಕರೆ ಜಮೀನಿನಲ್ಲಿ ಅಯೋಧ್ಯೆಯಲ್ಲಿ ನಿನ್ನೆ ಗಣರಾಜ್ಯೋತ್ಸವದ ದಿನ ಶುಭಾರಂಭ ಮಾಡಲಾಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯ ಧನ್ನೀಪುರದಲ್ಲಿ ಮಸೀದಿ ನಿರ್ಮಾಣವಾಗಲಿದೆ. ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಧ್ವಜಾರೋಹಣದ ನಂತರ ಸಸಿ ನೆಡುವ ಮೂಲಕ ಕಾರ್ಯ ನೆರವೇರಿದೆ. ಬೃಹತ್ ಗುಂಬಜ್ ಇರುವ ಮಸೀದಿ ಇದಾಗಿರಲಿದ್ದು, ಮಸೀದಿಯ ಹಿಂದೆ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗಲಿದೆ.
ನಿನ್ನೆ ಬೆಳಗ್ಗೆ ಟ್ರಸ್ಟ್ನ ಅಧ್ಯಕ್ಷರಾದ ಝಫರ್ ಅಹ್ಮದ್ ಫಾರೂಖಿ ಅವರು ಧ್ವಜಾರೋಹಣ ನೆರವೇರಿಸಿದರು. ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ನ ಸದಸ್ಯರು ಉಪಸ್ಥಿತರಿದ್ದರು.
ಸ್ಥಳದ ಮಣ್ಣು ಪರೀಕ್ಷೆ ಮಾಡುವ ಮೂಲಕ ನಾವು ಮಸೀದಿ ನಿರ್ಮಾಣ ಆರಂಭಿಸಿದ್ದೇವೆ. ಇದರ ಫಲಿತಾಂಶ ಬಂದ ಮೇಲೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈಗಾಗಲೇ ನಿಧಿ ಸಂಗ್ರಹ ಆರಂಭವಾಗಿದ್ದು, ಖಾತೆ ಹಣೆ ಜಮೆಯಾಗುತ್ತಿದೆ ಎಂದು ಫಾರೂಖಿ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳೇ ಇದರ ನೀಲ ನಕ್ಷೆಯನ್ನು ಬಿಡುಗಡೆ ಮಾಡಲಾಗಿತ್ತು. ಮಸೀದಿಯ ಹೆಸರು ಇನ್ನಷ್ಟೇ ಅಂತಿಮವಾಗಬೇಕಿತ್ತು. ಯಾವದೇ ರಾಜ ಅಥವಾ ಆಡಳಿಗಾರನ ಹೆಸರು ಇಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಮಸೀದಿಯಲ್ಲಿ ಏನೇನು ಇರಲಿದೆ ಎಂಬ ಬಗ್ಗೆ ಮಾಹಿತಿ ನೀಡಿರುವ ಅವರು, ಆಸ್ಪತ್ರೆಯ ಸಂಕೀರ್ಣದಲ್ಲಿ ಸಮುದಾಯ ಅಡುಗೆ ಮನೆ ಇರಲಿದೆ. ಅಪೌಷ್ಟಿಕತೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ನಾವು ನಿವಾರಿಸಲು ಯತ್ನಿಸುತ್ತೇವೆ. ಆದ್ದರಿಂದ ದಿನವೂ ಸಾವಿರ ಮಂದಿಗೆ ಇಲ್ಲಿ ಅನ್ನ ಸಂತರ್ಪಣೆ ಕಾರ್ಯ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶತಮಾನಗಳಿಂದ ವಿವಾದದ ಸುಳಿಯಲ್ಲಿಯೇ ಇದ್ದ ರಾಮಮಂದಿರ ಕೇಸ್ ಕುರಿತಂತೆ 2019ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಸ್ಥಳ ರಾಮನಿಗೇ ಸೇರಿದ್ದು ಎಂದು ಹೇಳಿತ್ತು. ಅಯೋಧ್ಯೆಯಲ್ಲಿಯೇ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಸ್ಥಳ ನೀಡಬೇಕು ಎಂದು ತೀರ್ಪು ನೀಡಿತ್ತು.
0 التعليقات: