ಮಹಾರಾಷ್ಟ್ರದ ಜಿಲ್ಲಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : ಹತ್ತು ನವಜಾತ ಶಿಶುಗಳ ಸಜೀವ ದಹನ
ಭಂಡಾರ : ಮಹಾರಾಷ್ಟ್ರದ ಭಂಡಾರ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಹತ್ತು ನವಜಾತ ಶಿಶುಗಳು ಸಜೀವ ದಹನವಾದ ದಾರುಣ ಘಟನೆ ನಡೆದಿದೆ. .
ಮುಂಜಾನೆ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 17 ಮಕ್ಕಳಲ್ಲಿ 7 ಮಕ್ಕಳನ್ನು ರಕ್ಷಿಸಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಆಸ್ಪತ್ರೆಯಲ್ಲಿದ್ದವರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿತು.
ಎಸ್ಎನ್ಐಸಿ ಎರಡು ಘಟಕಗಳನ್ನು ಹೊಂದಿದೆ. ಔಟ್ ಬಾರ್ನ್ ಮತ್ತು ಇನ್ ಬಾರ್ನ್. ಇವುಗಳಲ್ಲಿ, ಇನ್ ಬಾರ್ನ್ನಿಂದ ಏಳು ಮಕ್ಕಳನ್ನು ರಕ್ಷಿಸಲಾಗಿದೆ ಮತ್ತು ಔಟ್ ಬಾರ್ನ್ ಘಟಕದಲ್ಲಿದ್ದ 10 ಮಕ್ಕಳು ಸಾವನ್ನಪ್ಪಿವೆ.
0 التعليقات: