Wednesday, 27 January 2021

ರಾಜ್ಯ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ : `ಮನೆ ಬಾಗಿಲಿಗೆ ಮಾಸಾಶನ' ಅಭಿಯಾನಕ್ಕೆ ಚಾಲನೆ


ರಾಜ್ಯ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ : `ಮನೆ ಬಾಗಿಲಿಗೆ ಮಾಸಾಶನ' ಅಭಿಯಾನಕ್ಕೆ ಚಾಲನೆ


ಬೆಂಗಳೂರು : ಪಿಂಚಣಿದಾರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮನೆಗೇ ವೃದ್ಧಾಪ್ಯ ವೇತನ ತಲುಪಿಸುವ ಮನೆ ಬಾಗಿಲಿಗೆ ಮಾಸಾಶನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.


ದೇಶದಲ್ಲೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಮಾಸಾಶನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಸರ್ಕಾರದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನಕ್ಕೆ ಅರ್ಹರಾದವರು ಇನ್ಮುಂದೆ ಅರ್ಜಿ ಹಿಡಿದು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಯೋಜನೆಗೆ ಅರ್ಹರಾದವರ ಮನೆ ಬಾಗಿಲಿಗೇ ಸರ್ಕಾರದ ಅಧಿಕಾರಿಗಳನ್ನು ಕಳುಹಿಸಿ ಪಿಂಚಣಿ ಮಂಜೂರು ಮಾಡಲಿದೆ ಎಂದರು.


ಸಾಮಾಜಿಕ ಭದ್ರತೆ ಯೋಜನೆಯಡಿ ಜಾರಿಗೊಳಿಸಿರುವ ಸರ್ಕಾರದ ಈ ಕಾರ್ಯಕ್ರಮಗಳು ಹೆಚ್ಚು ಮಂದಿಗೆ ಸಿಗಲೆಂದು ಇದುವರೆಗೆ ಇದ್ದ 12 ಸಾವಿರ ರೂ. ವಾರ್ಷಿಕ ಆದಾಯ ಮಿತಿಯನ್ನು 35 ಸಾವಿ ರೂ.ಗಳಿಗೆ ಹೆಚ್ಚಿಸಲಾಗಿದೆ. 60 ವರ್ಷ ಮೀರಿದ ವಾರ್ಷಿಕ 35 ಸಾವಿರಕ್ಕಿಂತ ಕಡಿಮೆ ಆದಾಯ ಮಿತಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೆ ಬಂದು ಸರ್ಕಾರ ಪಿಂಚಣಿ ಮಂಜೂರು ಮಾಡಿಕೊಡಲಿದೆ ಎಂದು ಹೇಳಿದರು.SHARE THIS

Author:

0 التعليقات: