ಪ್ರವಾದಿ ನಗರವಾದ ಮದೀನಕ್ಕೆ ಜಗತ್ತಿನ ಆರೋಗ್ಯ ನಗರ ಎಂಬ ಖ್ಯಾತಿ
ಮದೀನಾ: ವಿಶ್ವ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮದೀನಾ ನಗರಕ್ಕೆ ಲೋಕದ ಆರೋಗ್ಯ ನಗರ ಎಂಬ ಪದವಿ ಲಭಿಸಿದ್ದಾಗಿ ಸೌದಿ ವಾರ್ತಾ ಏಜನ್ಸಿ ವರದಿಮಾಡಿದ್ದಾರೆ. 20 ಲಕ್ಷ ಜನರಿರುವ ಮದೀನಾದಲ್ಲಿ ವಿಶ್ವ ಆರೋಗ್ಯ ಸಂಘಟನೆಗಳು ಅಂಗೀಕರಿಸಿದ ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ದೃಢಪಟ್ಟಿರುವುದರಿಂದ ಈ ಖ್ಯಾತಿ ಪ್ರವಾದಿ ನಗರಕ್ಕೆ ಲಭಿಸಿದೆ. ಕೋವಿಡ್ ಮಹಾಮಾರಿ ಲೋಕದಲ್ಲಿ ವ್ಯಾಪಿಸುವುದರೊಂದಿಗೆ ಇದೇ ಮೊದಲ ಬಾರಿ, ಒಂದು ಪವಿತ್ರ ಸ್ಥಳವು ಆರೋಗ್ಯ ನಗರ ಎಂಬ ಪದವಿಗೆ ಒಳಪಡುವುದು. ಆರ್ಗನೈಝೇಷನಿನ ಸರ್ಟಿಫಿಕೇಟ್ ಸೌದಿ ಆರೋಗ್ಯ ಮಂತ್ರಿ ಅಲ್ ರಬೀಅ, ಮದೀನಾ ಗವರ್ನರ್ ಫೈಝಲ್ ಬಿನ್ ಸಲ್ಮಾನ್ ರಾಜ ಕುಮಾರನಿಗೆ ಕೊಟ್ಟರು.
0 التعليقات: