ಕಳ್ಳಿಯನ್ನು ಬಂಧಿಸುವ ಬದಲು ಕದ್ದ ವಸ್ತುವಿನ ಹಣ ಪಾವತಿಸಿದ ಪೊಲೀಸ್! ಇದರ ಹಿಂದಿದೆ ಹೃದಯಸ್ಪರ್ಶಿ ಕಾರಣ
ಅಂಗಡಿ ಕಳ್ಳತನದ ದೂರಿನ ಬಳಿಕ ಸ್ಥಳಕ್ಕೆ ಆಗಮಿಸಿದ ಅಮೆರಿಕ ಪೊಲೀಸ್ ಕಳ್ಳರ ಗುಂಪನ್ನ ಬಂಧಿಸುವ ಬದಲು ಕಳ್ಳರಿಗೆ ದಿನಸಿ ಕೊಳ್ಳಲು ಹಣ ನೀಡಿದ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಪೊಲೀಸ್ ಅಧಿಕಾರಿ ನೀಡಿದ ಹಣದಿಂದ ಈ ಕುಟುಂಬ ಕ್ರಿಸ್ಮಸ್ ಹಬ್ಬಕ್ಕೆ ಬೇಕಾದ ದಿನಸಿ ವಸ್ತುಗಳನ್ನ ಖರೀದಿ ಮಾಡಿದೆ.
ಕ್ರಿಸ್ಮಸ್ಗೆ ಐದು ದಿನ ಬಾಕಿ ಇದೆ ಎನ್ನುವಾಗ ಮ್ಯಾಸಚೂಸೆಟ್ಸ್ನ ಸೋಮರ್ಸೆಟ್ ಪೊಲೀಸ್ ಇಲಾಖೆಗೆ ಸೂಪರ್ ಮಾರ್ಕೆಟ್ ಒಂದರಲ್ಲಿ ಅಂಗಡಿ ಕಳ್ಳತನವಾಗಿದೆ ಅನ್ನೋದ್ರ ಬಗ್ಗೆ ದೂರವಾಣಿ ಕರೆಯೊಂದು ಬಂದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆಯ ಮ್ಯಾಟ್ ಲಿಮಾ ಸ್ಥಳ ಪರಿಶೀಲನೆಗೆ ತೆರಳಿದ್ರು.
ಸೂಪರ್ ಮಾರ್ಕೆಟ್ನ ಸಿಬ್ಬಂದಿ ಮಹಿಳೆ ವಸ್ತುಗಳನ್ನ ಸ್ಕ್ಯಾನ್ ಮಾಡದೇ ನೇರವಾಗಿ ತನ್ನ ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದುದನ್ನ ಕಂಡಿದ್ದೇನೆ ಎಂದು ಹೇಳಿದ್ರು. ಇಬ್ಬರು ಹೆಣ್ಣು ಮಕ್ಕಳನ್ನ ಹೊಂದಿದ್ದ ಮಹಿಳೆಯನ್ನ ನೋಡಿದ ಮ್ಯಾಟ್ ಲಿಮಾ ಮನಸ್ಸು ಕರಗಿದೆ. ತನಗೂ ಕೂಡ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಾಗಾಗಿ ಆಕೆಯ ಅಸಹಾಯಕತೆಗೆ ಧನಸಹಾಯ ಮಾಡಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ರು.
0 التعليقات: