ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ʼರಸ್ತೆ ಸುರಕ್ಷತೆʼಯ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ʼಸುಪ್ರೀಂ ಸಮಿತಿʼ ಸೂಚನೆ..!
ನವದೆಹಲಿ: ಧಾರವಾಡದ ಭೀಕರ ರಸ್ತೆ ಅಪಘಾತದಲ್ಲಿ 13 ಜನರು ಮೃತಪಟ್ಟಿದ್ದ ಪ್ರಕರಣವನ್ನ ಸುಪ್ರೀಂ ಕೋರ್ಟ್ ಸಮಿತಿ ಗಂಭೀರವಾಗಿ ಪರಿಗಣಿಸಿದ್ದು, ರಸ್ತೆ ಸುರಕ್ಷತೆಯ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರ್ಜುನ್ ಪರ್ವೇಜ್ ಅವರಿಗೆ ಸಮಿತಿ ಪತ್ರವನ್ನ ಕಳುಹಿಸಿದ್ದು, 'ಜನವರಿ 15ರಂದು ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಪ್ರಕರಣದ ವಿಸ್ತೃತ ವರದಿ ನೀಡುವಂತೆ ನಾವು ಸೂಚಿಸುತ್ತಿದ್ದೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅಪಘಾತ ತಡೆಯಲು ತೆಗೆದುಕೊಳ್ಳುವ ಕ್ರಮದ ಬಗ್ಗೆ ವಿವರಿಸಿ' ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.
ಇನ್ನು ಕಳೆದ ಎರಡು ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ 32 ಕಿ.ಮೀ ಅಂತರದಲ್ಲಿ ಎಷ್ಟು ಅಪಘಾತಗಳು ನಡೆದಿವೆ ಮತ್ತು ಅದರಲ್ಲಿ ಎಷ್ಟು ಜನ ಮೃತಪಟ್ಟಿದಾರೆ ಎನ್ನುವ ಬಗ್ಗೆಯೂ ವರದಿ ನೀಡಿ. ಇನ್ನು ಈ ವರದಿ ಫೆಬ್ರವರಿ 15ರೊಳಗೆ ನಮ್ಮ ಕೈ ಸೇರಬೇಕು ಎಂದು ಸಮಿತಿ ಸೂಚಿಸಿದೆ.
0 التعليقات: