ನಾಳೆ ಈಶ್ವರಮಂಗಳ ತ್ವೈಬಾ ಸೆಂಟರಿನಲ್ಲಿ ಸರಕಾರಿ ಸವಲತ್ತುಗಳ ಮಾಹಿತಿ ಶಿಬಿರ
ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಹಾಗೂ ಡಿಜಿಟಲ್ ಇಂಡಿಯಾ ಜನ ಸಂಪರ್ಕ ಕೇಂದ್ರ ಪುತ್ತೂರು ಸಹಯೋಗದೊಂದಿಗೆ "ಸರಕಾರಿ ಸವಲತ್ತುಗಳ ಮಾಹಿತಿ ಶಿಬಿರ" 2021 ಜನವರಿ 16 ಶನಿವಾರ (ನಾಳೆ) ಬೆಳಗ್ಗೆ 9:30 ರಿಂದ ತ್ವೈಬಾ ಸೆಂಟರ್ ಈಶ್ವರಮಂಗಳದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ
ವಿಧವಾ ವೇತನ
ವೃಧಾಪ್ಯ ವೇತನ
ಮನಸ್ವಿನಿ ಯೋಜನಾ ವೇತನ
ಅಲ್ಪ ಸಂಖ್ಯಾತ ಸವಲತ್ತುಗಳು
ವಕ್ಫ್ ಬೋರ್ಡ್ ಸೌಲಭ್ಯಗಳು
ಕಟ್ಟಡ ಕಾರ್ಮಿಕ ಸವಲತ್ತುಗಳು
ಪಾನ್ ಕಾರ್ಡ್
ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್
ಹಿರಿಯ ನಾಗರಿಕರಿಕ ಕಾರ್ಡ್
ವಿದ್ಯಾರ್ಥಿ ಬಸ್ ಪಾಸ್
ಹಾಗೂ ಇನ್ನಿತರ ಮಾಹಿತಿಗಳ ಸಮಗ್ರ ಕಾರ್ಯಾಗಾರ ಹಾಗೂ ದಾಖಲೆಗಳ ಸಹಿತ ಬಂದವರಿಗೆ ಈ ಎಲ್ಲ ಯೋಜನೆಗಳನ್ನು ಮಾಡಿಕೊಡಲಾಗವುದು ಎಂದು ತಿಳಿದು ಬಂದಿದೆ.
ಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್, ಫೋಟೋಗಳು, ಬ್ಯಾಂಕ್ ಪಾಸ್ ಬುಕ್
0 التعليقات: