Tuesday, 12 January 2021

ತಮಿಳುನಾಡಿನಲ್ಲಿ ಭೀಕರ ಅವಘಡ : ಬಸ್ಸಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಐವರ ದುರ್ಮರಣ, ಎಂಟು ಮಂದಿಗೆ ಗಂಭೀರ ಗಾಯ


ತಮಿಳುನಾಡಿನಲ್ಲಿ ಭೀಕರ ಅವಘಡ : ಬಸ್ಸಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಐವರ ದುರ್ಮರಣ, ಎಂಟು ಮಂದಿಗೆ ಗಂಭೀರ ಗಾಯ

ಡಿಜಿಟಲ್ ಡೆಸ್ಕ್ : ಖಾಸಗಿ ಬಸ್ಸೊಂದು ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಐವರು ಪ್ರಯಾಣಿಕರು ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಭೀಕರ ಘಟನೆ ತಮಿಳುನಾಡಿನ ತಂಜಾವೂರ್ ಜಿಲ್ಲೆ ತಿರುವೈಯಾರ್ ಸಮೀಪ ವರಗೂರ್ ನಲ್ಲಿ ನಡೆದಿದೆ.

ಲಾರಿಯನ್ನು ಚೇಸ್ ಮಾಡುವುದಕ್ಕೆ ಯತ್ನಿಸಿದ ಬಸ್‌ನ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ಹೈ ಟೆನ್ಷನ್ ವಿದ್ಯುತ್ ತಗುಲಿಸಿದ್ದಾನೆ. ಪರಿಣಾಮ, ಸ್ಥಳದಲ್ಲಿಯೇ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದರೆ , 10 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇನ್ನಿಬ್ಬರು ಸಾವಿಗೀಡಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 


SHARE THIS

Author:

0 التعليقات: