Saturday, 30 January 2021

ವೇತನದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಿಹಿಸುದ್ದಿ


ವೇತನದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಿಹಿಸುದ್ದಿ


ಮಂಗಳೂರು : ವೇತನದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಸಾರಿಗೆ ನೌಕರರ ವೇತನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ ಆರ್ ಟಿಸಿ 4 ನಿಗಮಗಳ ಸಾರಿಗೆ ಸಿಬ್ಬಂದಿಗೆ ಬಾಕಿಯುಳಿದ ಅರ್ಧ ವೇತನವನ್ನು ಡಿಸೆಂಬರ್ ಅಂತ್ಯದೊಳಗೆ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಜನವರಿ ತಿಂಗಳ ವೇತನವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.SHARE THIS

Author:

0 التعليقات: