Wednesday, 13 January 2021

ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಸಿದ್ದರಾಮಯ್ಯರನ್ನೇ ಜೈಲಿಗೆ ಹಾಕುತ್ತೇವೆ : ಪ್ರಭು ಚವ್ಹಾಣ್

 

ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಸಿದ್ದರಾಮಯ್ಯರನ್ನೇ ಜೈಲಿಗೆ ಹಾಕುತ್ತೇವೆ : ಪ್ರಭು ಚವ್ಹಾಣ್

ಕೊಪ್ಪಳ: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೂ ಸಿದ್ದರಾಮಯ್ಯ ಅವರು ಗೋ ಮಾಂಸ ತಿನ್ನುವೆ ಎಂದೆನ್ನುತ್ತಿದ್ದಾರೆ. ಈ ರೀತಿ ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಅವರನ್ನೇ ಜೈಲಿಗೆ ಹಾಕ್ತೇವೆ ಎಂದು ಪಶು ಪಾಲನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದೇವೆ. ಗೋವುಗಳನ್ನು ನಾವು ಮಾತೆ ಎಂದು ಪೂಜೆ ಮಾಡುತ್ತೇವೆ. ಅವುಗಳನ್ನು ಹತ್ಯೆ ಮಾಡಿ ತಿನ್ನುವುದು ಮಹಾ ಅಪರಾಧ. ಸಿದ್ದರಾಮಯ್ಯ ಅವರೂ ಗೋವುಗಳನ್ನು ಮಾತೆ ಎಂದು ಪೂಜೆ ಮಾಡ್ತಾರೆ. ಆದರೆ ಗೋ ಮಾಂಸ ತಿನ್ನುತ್ತೇವೆ ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಎಂದರಲ್ಲದೇ, ಜಗದೀಶ್ ಶೆಟ್ಟರ್ ಅವರು ನನಗೊಂದು ಸಲಹೆ ನೀಡಿದ್ದಾರೆ.


ಮುಂದಿನ ದಿನದಲ್ಲಿ ಗೋವು ಹತ್ಯೆಗೆ ಪ್ರಚೋದನೆ ನೀಡುವವರ ಮೇಲೆ ಕ್ರಮ ಕೈಗೊಳ್ಳುವ ಕಾಯ್ದೆ ತರುವಂತೆ ಹೇಳಿದ್ದಾರೆ. ಅದರಂತೆ ಗೋಹತ್ಯೆ ಬಗ್ಗೆ ಪ್ರೋಚದನೆ ನೀಡಿದರೆ ನಾವು ಸಿದ್ದರಾಮಯ್ಯರನ್ನೂ ಜೈಲಿಗೆ ಹಾಕ್ತೇವೆ. ಸಿದ್ದರಾಮಯ್ಯ ಹಿಂದೂವಾದ್ರೂ, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ವಿರೋಧಿಸುತ್ತಾರೆ. ಅವರೊಬ್ಬ ವಿರೋಧ ಪಕ್ಷದ ನಾಯಕರಾಗಿ ಕಾಯ್ದೆಯನ್ನ ವಿರೋಧ ಮಾಡುತ್ತಿದ್ದಾರೆ ಅಷ್ಟೆ ಎಂದರು.SHARE THIS

Author:

0 التعليقات: