Thursday, 21 January 2021

ಬೆಳ್ಳಿಪ್ಪಾಡಿ ಉಸ್ತಾದ್, ಸರ್ವ ಸದ್ಗುಣಗಳು ಒಂದುಗೂಡಿದ ವಿದ್ವಾಂಸ -ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್

 

ಬೆಳ್ಳಿಪ್ಪಾಡಿ ಉಸ್ತಾದ್, ಸರ್ವ ಸದ್ಗುಣಗಳು ಒಂದುಗೂಡಿದ ವಿದ್ವಾಂಸ
-ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್  

ಕೋಝಿಕ್ಕೋಡ್: ಸದ್ಗುಣ ಸಂಪನ್ನರೂ ಸಯ್ಯಿದ್'ಗಳೊಂದಿಗೂ, ಆಲಿಂಗಳೊಂದಿಗೂ ಉತ್ತಮ ಒಡನಾಟ ಇದ್ದ ದೊಡ್ಡ ವಿದ್ವಾಂಸರಾಗಿದ್ದರು ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ ಎಂದು  ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಹಲವಾರು ವರ್ಷಗಳು ದರ್ಸ್ ನಡೆಸಿಯೂ ಈಗ ಮುಹಿಮ್ಮಾತಿನ ಸದರ್ ಮುದರ್ರಿಸ್ ಮತ್ತು ಕಾರ್ಯಕಾರಿ ಸದಸ್ಯರೂ, ಮುಹಿಮ್ಮಾತಿಗಾಗಿ ಪ್ರಾರಂಭ ಕಾಲದಿಂದಲೇ ಕಾರ್ಯಾಚರಿಸಿದ್ದ ಓರ್ವ ಮಹಾ ಪಂಡಿತರಾಗಿದ್ದಾರೆ ಅವರು.

ಒಂದು ಕಾಲದಲ್ಲಿ ಅವರ ಭಾಷಣ ಜನರನ್ನು ಆಧ್ಯಾತ್ಮಿಕವಾಗಿ ಮುನ್ನಡೆಸುವುದರಲ್ಲಿ ದೊಡ್ಡ ಸ್ವಾಧೀನ ಆಗಿತ್ತು. ಉಸ್ತಾದರಿಗಾಗಿ ಶಿಷ್ಯಂದಿರು ಮತ್ತು ಸಂಘಟನಾ ಕಾರ್ಯಕರ್ತರು ಪ್ರಾರ್ಥನಾ ಮಜ್ಲಿಸ್ ಗಳು, ಕುರ್ಆನ್ ಪಠಣೆ, ತಹ್ಲೀಲ್ ಮಜ್ಲಿಸ್ ಗಳು ಮಾಡಬೇಕಾಗಿ ವಿನಂತಿಸಿದರು.


SHARE THIS

Author:

0 التعليقات: