Saturday, 16 January 2021

ಈಶ್ವರಮಂಗಲದಲ್ಲಿ ಯಶಸ್ವಿಯಾಗಿ ಜರಗಿದ ಸರಕಾರಿ ಸವಲತ್ತುಗಳ ಮಾಹಿತಿ ಕಾರ್ಯಾಗಾರ


ಈಶ್ವರಮಂಗಲದಲ್ಲಿ ಯಶಸ್ವಿಯಾಗಿ ಜರಗಿದ ಸರಕಾರಿ ಸವಲತ್ತುಗಳ ಮಾಹಿತಿ ಕಾರ್ಯಾಗಾರ 


 ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಇದರ ಆಶ್ರಯದಲ್ಲಿ ಡಿಜಿಟಲ್ ಇಂಡಿಯಾ ಜನಸಂಪರ್ಕ ಕೇಂದ್ರ , ಕೆಜೆಎಂ ಕಮ್ಯುನಿಕೇಶನ್ ಸೆಂಟರ್, ಆರ್ಲಪದವು ಕಮ್ಯುನಿಕೇಷನ್ ಸೆಂಟರ್, ಎ. ಎಂ ಬಿಲ್ಡಿಂಗ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎದರುಗಡೆ ಪುತ್ತೂರು ಇದರ ಸಹಯೋಗದೊಂದಿಗೆ ತ್ವೈಬ ಎಜುಕೇಶನ್ ಸೆಂಟರ್ ಈಶ್ವರಮಂಗಲ ಇವರ ಸಹಕಾರದೊಂದಿಗೆ ವಕ್ಫ್ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಯಿಂದ ಸಿಗುವ ಸವಲತ್ತುಗಳು ಮತ್ತು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ನೋಂದಣಿ ಶಿಬಿರವು ಈಶ್ವರಮಂಗಲ ತ್ವೈಬ ಎಜ್ಯುಕೇಶನ್ ಸೆಂಟರ್ ನಲ್ಲಿ ಜರಗಿತು. ಸಮಾರಂಭದಲ್ಲಿ ಖಲೀಲ್ ಸಲಾಹ್ ವಿದ್ಯಾ ಸಂಸ್ಥೆಯ ಛಯರ್ಮ್ಯಾನ್ ಸಯ್ಯದ್ ಹಸನ್ ಅಬ್ದುಲ್ಲ ಇಂಬಿಚಿಕೋಯ ತಂಙಳ್ ರವರು ದುಆ ನೆರವೇರಿಸಿದರು.  ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧ್ಯಕ್ಷ ಸಿಎಂ ಅಬೂಬಕ್ಕರ್ ಕರ್ನೂರು ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಇವರು   ಸಮಾರಂಭವನ್ನು ಉದ್ಘಾಟಿಸಿದರು ಕಾರ್ಯಾಗಾರದ ರೂವಾರಿ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು ಅವರು ಪ್ರಾಸ್ತಾವಿಕ ಮಾತನಾಡಿದರು  ವಕ್ಫ್ ಇಲಾಖೆಯ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರದ ಮೊಹಮ್ಮದ್ ನಝೀರ್ ಎಚ್ ,   ಈಶ್ವರಮಂಗಲ ವಲಯ ಆರಕ್ಷಕ ಉಪ ಠಾಣೆಯ ಮುನಿಯ ನಾಯ್ಕ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರ ನಡೆಸಿಕೊಟ್ಟರು ತ್ವೈಬ ಎಜುಕೇಶನ್ ಸೆಂಟರ್ ಈಶ್ವರಮಂಗಳ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ , ಪಡುಮಲೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಬಡಗನ್ನೂರು,  ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ್ ,   ರಮೇಶ್ ರೈ ಸಾಂತ್ಯ ಇವರು ಸಂದರ್ಭೋಚಿತವಾಗಿ ಮಾತನಾಡಿದರು ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಕೋಶಾಧಿಕಾರಿ ಮೊಹಮ್ಮದ್ ಹಾಜಿ ಕುಕ್ಕುವಳ್ಳಿ ಈಶ್ವರಮಂಗಲ ವಲಯ ಆರಕ್ಷಕ ಉಪ  ಠಾಣೆಯ ದಯಾನಂದ,  ಗಿರೀಶ,  ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಪಳ್ಳತ್ತೂರು,  ಶ್ರೀ ರಾಮ್ ಪಕ್ಕಳ , ರಾಮ ಮೇನಾಲ,  ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಲ,  ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಖಾದರ್ ಕರ್ನೂರು   ಹಸೈನಾರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮದನಿ ಸ್ವಾಗತಿಸಿ ವಂದಿಸಿದರು ಆರ್ಲಪದವು ಕಮ್ಯುನಿಕೇಶನ್ ಸೆಂಟರ್ ಕಛೇರಿ ಮುಖ್ಯಸ್ಥರಾದ ರವಿ ಶೋಭಾ , ಕಾರ್ಯಕ್ರಮ ಸಂಯೋಜಕರಾದ ಅಬ್ದುಲ್ಲಾ ಮೆಣಸಿನಕಾನ , ಸಹಾಯಕರಾದ ಎಸ್ ಫಾತಿಮಾತ್ ಸಂಶೀರ ,  ಎಸ್ ಉಮ್ಮರ್ ಶಾಫಿ ಆರ್ಲಪದವು,  ಗಿರೀಶ್ ಗೋಲ್ವಾಲ್ಕರ್,  ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಕಾರ್ಯದರ್ಶಿ ಶರೀಪ್ ಪಿಎಚ್ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


SHARE THIS

Author:

0 التعليقات: