Monday, 18 January 2021

ಕರೊನಾ ಲಸಿಕೆ ಪಡೆದ ವಾರ್ಡ್ ಬಾಯ್​ ಸಾವು! ಕುಟುಂಬ, ಆರೋಗ್ಯ ಇಲಾಖೆ ಹೇಳಿದ್ದೇನು?


 ಕರೊನಾ ಲಸಿಕೆ ಪಡೆದ ವಾರ್ಡ್ ಬಾಯ್​ ಸಾವು! ಕುಟುಂಬ, ಆರೋಗ್ಯ ಇಲಾಖೆ ಹೇಳಿದ್ದೇನು?

ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್​ನ ಸರ್ಕಾರಿ ಆಸ್ಪತ್ರೆಯ ವಾರ್ಡ್​ ಬಾಯ್​ ಕರೊನಾ ಲಸಿಕೆ ಪಡೆದು 24 ಗಂಟೆಗಳ ನಂತರ ಸಾವನ್ನಪ್ಪಿದ್ದಾನೆ. ಸಾವಿಗೆ ಕಾರಣ ಲಸಿಕೆಯಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರಾದರೂ, ಲಸಿಕೆ ಪಡೆದ ನಂತರವೇ ಆತ ಹೆಚ್ಚು ಅಸ್ವಸ್ಥನಾಗಿದ್ದಾಗಿ ಕುಟುಂಬ ದೂರಿದೆ.

46 ವರ್ಷದ ಮಹಿಪಾಲ್​ ಸಿಂಗ್​ ಮೃತ ದುರ್ದೈವಿ. ಈತ ಶನಿವಾರ ಮಧ್ಯಾಹ್ನದ ವೇಳೆ ಆಸ್ಪತ್ರೆಯಲ್ಲಿ ಕರೊನಾ ಲಸಿಕೆ ಪಡೆದಿದ್ದ. ಭಾನುವಾರ ಸಂಜೆ ಮೃತನಾಗಿದ್ದಾನೆ. ಸಾಯುವ ಮುನ್ನ ಎದೆ ನೋವು ಎಂದು ಹೇಳಿದ್ದು, ಉಸಿರಾಡಲು ತೊಂದರೆಯಾಗಿತ್ತೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆತ ಲಸಿಕೆ ಪಡೆಯುವುದಕ್ಕೂ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿದ್ದುದ್ದಾಗಿ ತಿಳಿಸಲಾಗಿದೆ.

ನನ್ನ ತಂದೆ ಶನಿವಾರ ಮಧ್ಯಾಹ್ನ 1.30ರ ಸಮಯಕ್ಕೆ ಲಸಿಕೆ ಪಡೆದರು. ಅದಾದ ನಂತರ ನಾನೇ ಅವರನ್ನು ಮನೆಗೆ ಕರೆತಂದೆ. ಅವರಿಗೆ ಮೊದಲಿನಿಂದಲೂ ಹುಷಾರಿರಲಿಲ್ಲವಾದರೂ ಲಸಿಕೆ ಪಡೆದ ಮೇಲೆ ಹೆಚ್ಚು ಕೆಮ್ಮುತ್ತಿದ್ದರು, ಉಸಿರಾಡುವುದಕ್ಕೆ ತೊಂದರೆಯಾಗುತ್ತಿರುವುದಾಗಿ ಹೇಳುತ್ತಿದ್ದರು ಎಂದು ಮೃತನ ಮಗ ತಿಳಿಸಿದ್ದಾರೆ.

ಮೃತನಾದ ವ್ಯಕ್ತಿ ಮೊದಲೇ ಅಸ್ವಸ್ಥನಾಗಿದ್ದ. ಆತನ ಸಾವಿಗೆ ಲಸಿಕೆಯೇ ಕಾರಣ ಎಂದು ಹೇಳಲಾಗುವುದಿಲ್ಲ. ಲಸಿಕೆ ಪಡೆದ ನಂತರ ಆತ ಚೆನ್ನಾಗಿಯೇ ಇದ್ದ. ಶನಿವಾರ ರಾತ್ರಿ ಶಿಫ್ಟ್​ನಲ್ಲಿ ಕೆಲಸ ಮಾಡಿದ್ದಾನೆ ಕೂಡ ಎಂದು ಮೊರಾದಾಬಾದ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಎಂ.ಸಿ.ಗಾರ್ಗ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತ ಹೃದಯಾಘಾತದಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ.


SHARE THIS

Author:

0 التعليقات: