Sunday, 3 January 2021

ನಾನು ಆರೋಗ್ಯವಾಗಿದ್ದೇನೆ, ಶುಭ ಹಾರೈಸಿದ ಪ್ರತಿಯೊಬ್ರಿಗೂ ಧನ್ಯವಾದ: ಸದಾನಂದ ಗೌಡ


ನಾನು ಆರೋಗ್ಯವಾಗಿದ್ದೇನೆ, ಶುಭ ಹಾರೈಸಿದ ಪ್ರತಿಯೊಬ್ರಿಗೂ ಧನ್ಯವಾದ: ಸದಾನಂದ ಗೌಡ

ಬೆಂಗಳೂರು: ಲೋ ಶುಗರ್‌ ಆಸ್ವತ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಸಚಿವರಾದ ಡಿ.ವಿ.ಸದಾನಂದ ಗೌಡ ಅವರು, ನಾನು ಆರೋಗ್ಯವಾಗಿದ್ಧೇನೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ ಮೂಲಕ ಜನತೆಗೆ ಧನ್ಯವಾದ ತಿಳಿಸಿದ ಗೌಡರು, 'ನನ್ನ ಆರೋಗ್ಯ ಸುಸ್ಥಿರವಾಗಿದೆ. ಸಕ್ಕರೆ ಅಂಶ ಕಡಿಮೆಯಾಗಿ ಸ್ವಲ್ಪ ಸುಸ್ತಾಗಿತ್ತು. ಈಗ ಆರಾಮವಾಗಿದ್ದೇನೆ. ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್‌ಗಳು ಸಹಜವಾಗಿವೆ. ಸದೃಢ ಆರೋಗ್ಯಕ್ಕಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ.


SHARE THIS

Author:

0 التعليقات: