Thursday, 14 January 2021

ಸಿ.ಡಿ ಭ್ರಷ್ಟಾಚಾರ ಬಗ್ಗೆ ಬಿಜೆಪಿಯ ಶಾಸಕರುಗಳೇ ಮಾತಾಡುತ್ತಿದ್ದಾರೆ; ಈಡಿ, ಸಿಬಿಐ ಈಗೇನು ಮಾಡುತ್ತಿದೆ? : ಡಿಕೆಶಿ ವಾಗ್ದಾಳಿ


ಸಿ.ಡಿ ಭ್ರಷ್ಟಾಚಾರ ಬಗ್ಗೆ ಬಿಜೆಪಿಯ ಶಾಸಕರುಗಳೇ ಮಾತಾಡುತ್ತಿದ್ದಾರೆ; ಈಡಿ, ಸಿಬಿಐ ಈಗೇನು ಮಾಡುತ್ತಿದೆ? : ಡಿಕೆಶಿ ವಾಗ್ದಾಳಿ

ಬೆಂಗಳೂರು : ಬಿಜೆಪಿ ಬ್ಲಾಕ್ ಮೇರ‍್ಸ್, ಭ್ರಷ್ಟಾಚಾರಿಗಳ ಪಕ್ಷ. ಹೀಗಂತ ನಾನು ಹೇಳುತ್ತಿಲ್ಲ, ಸ್ವತಃ ಬಿಜೆಪಿ ಶಾಸಕರು, ಸಚಿವರುಗಳೇ ಹೇಳುತ್ತಿದ್ದಾರೆ. ಈಗ ಸಿಬಿಐ, ಈಡಿ, ಎಸಿಬಿ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬಿಜೆಪಿ ಶಾಸಕರು, ಸಚಿವರೇ ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಈಡಿ, ಸಿಬಿಐ, ಎಸಿಬಿ ಅಧಿಕಾರಿಗಳು ಈಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ನಾನು ಈ ಹಿಂದೆ ಕಾರವಾರದಲ್ಲಿ ಸಿಡಿ ವಿಚಾರ ಹೇಳಿದಾಗ, ಏನೂ ಇಲ್ಲ ಎಂದಿದ್ದರು. ಈಗ ಅವರದೇ ಪಕ್ಷದ ನಾಯಕರು ಸಿಡಿ ವಿಚಾರ ಹೇಳುತ್ತಿದ್ದಾರೆ. ಸಿಡಿ ಒಳಗೆ ಏನಿದೆ? ಭ್ರಷ್ಟಾಚಾರ ಎಷ್ಟು ನಡೆದಿದೆ? ಎಂದು ಅವರಿಗೆ ಗೊತ್ತಿದೆ. ಈಡಿ, ಎಸಿಬಿ ಸ್ವಯಂ ಪ್ರೇರಿತ ಕೇಸ್ ಯಾಕೆ ಹಾಕಿಲ್ಲ? ಈಗ ಏಕೆ ಎಲ್ಲಾ ಸುಮ್ಮನಿದ್ದಾರೆ? ಈ ಬಗ್ಗೆ ಹೈಕರ‍್ಟ್ ನ್ಯಾಯಾಧೀಶದ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಅವರು ಒತ್ತಾಯಿಸಿದ್ದಾರೆ.   SHARE THIS

Author:

0 التعليقات: