Sunday, 10 January 2021

ಟ್ರಂಪ್ ಖಾತೆ ಅಮಾನತು: ಟ್ವೀಟರ್ ನಲ್ಲಿ ಪ್ರಧಾನಿ ಮೋದಿ ಟಾಪ್


ಟ್ರಂಪ್ ಖಾತೆ ಅಮಾನತು: ಟ್ವೀಟರ್ ನಲ್ಲಿ ಪ್ರಧಾನಿ ಮೋದಿ ಟಾಪ್

ನವದೆಹಲಿ: ಟ್ವೀಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಟ್ವಿಟ್ಟರ್ ಮೂಲಕ ಅತಿಹೆಚ್ಚು ಮಂದಿ ಪ್ರಧಾನಿ ಮೋದಿಅವರನ್ನು ಅನುಸರಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಸದಾ ಸಕ್ರಿಯವಾಗಿರುತ್ತಾರೆ. ಹೊಸ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಪ್ರಸ್ತುತ ಟ್ವಿಟರ್ ನಲ್ಲಿ ಮೋದಿ ಅವರನ್ನು 64.7 ದಶಲಕ್ಷ ಮಂದಿ ಅನುಸರಿಸುತ್ತಿದ್ದಾರೆ.

ಆದರೆ, ಮೊನ್ನೆಯವರೆಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಅಗ್ರ ಸ್ಥಾನದಲ್ಲಿದ್ದರು. ಅವರು 88.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಆದರೆ ವಾಷಿಂಗ್ಟನ್ ನಲ್ಲಿ ನಡೆದ ಬೆಳವಣಿಗೆಗಳ ನಂತರ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತ್ತುಗೊಳಿಸಲಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ಮೊದಲಿನ ಸಾಲಿಗೆ ಸೇರಿದ್ದಾರೆ. ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ 23.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಇನ್ನೂ ಭಾರತದ ವಿಷಯಕ್ಕೆ ಬಂದರೆ ಕೇಂದ್ರ ಗೃಹ ಸಚಿವ ಷಾ ಅವರಿಗೆ 24.2 ದಶಲಕ್ಷ ಮಂದಿ ಅನುಯಾಯಿಗಳಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 21.2 ದಶಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಆದರೆ, ರಾಜಕೀಯವಾಗಿ ಸಕ್ರಿಯವಾಗಿಲ್ಲದ ನಾಯಕರ ಪಟ್ಟಿಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಗ್ರಸ್ಥಾನದಲ್ಲಿದ್ದಾರೆ. ಟ್ವಿಟರ್

ನಲ್ಲಿ ಒಬಾಮಾ ಅವರಿಗೆ 127.9 ಮಿಲಿಯನ್ ಫಾಲೋವರ್ಸ್ ಇದ್ದಾರೆ.
SHARE THIS

Author:

0 التعليقات: