Sunday, 3 January 2021

ರಿಸೆಪ್ಷನ್ ಗೆ ಇದ್ದ ವರ ಮದ್ವೆಗೆ ಇರ್ಲಿಲ್ಲ : ಮದುವೆ ಮನೆಯಿಂದಲೇ ಗಂಡು ಎಸ್ಕೇಪ್ ; ಅದೇ ಛತ್ರದಲ್ಲಿ ಮದುಮಗಳ ಕೈ ಹಿಡಿದ 'ಕಂಡಕ್ಟರ್'


ರಿಸೆಪ್ಷನ್ ಗೆ ಇದ್ದ ವರ ಮದ್ವೆಗೆ ಇರ್ಲಿಲ್ಲ : ಮದುವೆ ಮನೆಯಿಂದಲೇ ಗಂಡು ಎಸ್ಕೇಪ್ ; ಅದೇ ಛತ್ರದಲ್ಲಿ ಮದುಮಗಳ ಕೈ ಹಿಡಿದ 'ಕಂಡಕ್ಟರ್'


ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ.

ಹೌದು, ನಿನ್ನೆ ರಾತ್ರಿವರೆಗೂ ಮದುವೆಗೆ ಒಪ್ಪಿದ ವರ ಕೊನೆ ಕ್ಷಣದಲ್ಲಿ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ. ಮದುವೆಗೆ ಒಪ್ಪಿ ಭರ್ಜರಿಯಾಗಿ ರಿಸೆಪ್ಷನ್ ಮುಗಿಸಿದ ವರನೊಬ್ಬ ಮದುವೆ ಸಂದರ್ಭದಲ್ಲಿ ಎಸ್ಕೇಪ್ ಆಗಿದ್ದಾನೆ. ಬಳಿಕ ಮದುವೆ ಮನೆಯಲ್ಲಿದ್ದ ಬಿಎಂಟಿಸಿ ಕಂಡಕ್ಟರ್ ಯುವತಿಯ ಕೈ ಹಿಡಿದ ಘಟನೆಯೊಂದು ತರೀಕೆರೆಯ ಶೃಂಗೇರಿ ಸಮುದಾಯ ಭವನದಲ್ಲಿ ನಡೆದಿದೆ.

ಏನಿದು ಘಟನೆ…?

ಧೋರನಾಳು ಗ್ರಾಮದ ನಿವಾಸಿ ನವೀನ್ ಗೆ ಹೊಸದುರ್ಗದ ನಿವಾಸಿ ಸಿಂಧು ಎನ್ನುವ ಯುವತಿ ಜೊತೆ ಮದುವೆ ಫಿಕ್ಸ್ ಆಗಿತ್ತು. ಆದ್ರೆ ವರ ನವೀನ್ ಪ್ರೀತಿಸಿದ ಯುವತಿ ಈ ಮದುವೆ ನಿಲ್ಲಿಸುವ ಬೆದರಿಕೆಯೊಡ್ಡಿದ್ದಳು. ಆದ್ದರಿಂದ ನವೀನ್ ರಿಸೆಪ್ಶನ್ ಮುಗಿಸಿದ ಬಳಿಕ ಚತ್ರದಿಂದಲೇ ಕಾಣೆಯಾಗಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಮದುವೆ ನಿಂತು ಹುಡುಗಿ ಬಾಳು ಹಾಳಾಗುತ್ತದೆ ಎಂಬುದನ್ನು ಅರಿತ ತರೀಕೆರೆ ತಾಲೂಕಿನ ನಂದಿ ಗ್ರಾಮದ ನಿವಾಸಿ ಬಿಎಂಟಿಸಿ ಕಂಡಕ್ಟರ್ ಸೇವೆಯಲ್ಲಿದ್ದ ಚಂದ್ರು ಯುವತಿಯನ್ನು ಮದುವೆಯಾಗಿ ಬಾಳು ನೀಡಿದ್ದಾರೆ.



SHARE THIS

Author:

0 التعليقات: