Sunday, 17 January 2021

'ಬಳಕೆದಾರರ ಮನವೊಲಿಕೆ'ಗೆ 'ಸ್ಟೇಟಸ್ ಸಂಧಾನ'ಕ್ಕಿಳಿದ 'ವಾಟ್ಸ್ ಆಪ್'


'ಬಳಕೆದಾರರ ಮನವೊಲಿಕೆ'ಗೆ 'ಸ್ಟೇಟಸ್ ಸಂಧಾನ'ಕ್ಕಿಳಿದ 'ವಾಟ್ಸ್ ಆಪ್'


ನವದೆಹಲಿ : ಹೊಸ ಗೌಪ್ಯ ನೀತಿಯಿಂದಾಗಿ ಬಳಕೆದಾರರ ತೀವ್ರ ವಿರೋಧಕ್ಕೆ ಫೇಸ್ ಬುಕ್ ಹೊಡೆತನದ ವಾಟ್ಸ್ ಆಪ್ ಗುರಿಯಾಗಿತ್ತು. ಇಂತಹ ವಾಟ್ಸ್ ಆಪ್ ಇದೀಗ ಬಳಕೆದಾರರ ಮನವೊಲಿಕೆಗೆ ಸ್ಟೇಟಸ್ ಮೂಲಕ ಮುಂದಾಗಿದೆ. ವಾಟ್ಸ್ ಆಪ್ ನಾಲ್ಕು ಸ್ಟೇಟಸ್ ಮೂಲಕ ಗೌಪ್ಯತೆಗೆ ಸಂಬಂಧಿಸಿದಂತ ಅನುಮಾನವನ್ನು ಬಳಕೆದಾರರಿಗೆ ತಿಳಿಸಿಕೊಟ್ಟಿದೆ.


ಈ ಕುರಿತಂತೆ ವಾಟ್ಸ್ ಆಪ್ ಬಳಕೆದಾರರು ವಾಟ್ಸ್ ಆಪ್ ಸ್ಟೇಟಸ್ ಓಪನ್ ಮಾಡಿದ್ರೇ.. ಬಳಕೆದಾರರಿಗೆ ಮೊದಲಿಗೆ ವಾಟ್ಸ್ ಆಪ್ ಸ್ಟೇಟಸ್ ಅನ್ನು ತೋರಿಸುತ್ತಿದೆ. ಅಂತಹ ವಾಟ್ಸ್ ಆಪ್ ಸ್ಟೇಟಸ್ ತೆರೆದ್ರೇ.. ನಾಲ್ಕು ಸ್ಟೇಟಸ್ ಮೂಲಕ ಬಳಕೆದಾರರಿಗೆ ತಿಳಿಸುವಂತ ಪ್ರಯತ್ನ ನಡೆಸಿದೆ.


ಇಂದು ವಾಟ್ಸ್ ಆಪ್ ಮೆಸೇಂಜಿಗ್ ಅಪ್ಲಿಕೇಷನ್ ವಾಟ್ಸ್ ಆಪ್ ಸ್ಟೇಟಸ್ಸ್ ಅನ್ನು ಬಳಕೆದಾರರಿಗೆ ತೋರಿಸುತ್ತಿದ್ದು. ಇದನ್ನು ತೆರೆದ್ರೇ.. ನಾವು ನಿಮ್ಮ ಗೌಪ್ಯತೆ ರಕ್ಷಿಸಲು ಬದ್ಧರಾಗಿದ್ದೇವೆ. ನಿಮ್ಮ ವೈಯಕ್ತಿಕ ಸಂಭಾಷಣೆಯನ್ನು ವಾಟ್ಸ್ ಆಪ್ ಓದಲು ಸಾಧ್ಯವಿಲ್ಲ. ನೀವು ಹಂಚಿಕೊಂಡ ಸ್ಥಳವನ್ನು ವಾಟ್ಸ್ ಆಪ್ ನೋಡುವುದೂ ಇಲ್ಲ. ನಿಮ್ಮ ಸಂಪರ್ಕಗಳನ್ನು ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳುವುದೂ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.



SHARE THIS

Author:

0 التعليقات: