ಪಶ್ಚಿಮ ಬಂಗಾಳ: ಬಿಜೆಪಿ ಕಚೇರಿಯಲ್ಲೇ ಪಕ್ಷದ ಎರಡು ಗುಂಪುಗಳ ನಡುವೆ ಘರ್ಷಣೆ, ವಾಹನಗಳಿಗೆ ಬೆಂಕಿ
ಬುರ್ದ್ವಾನ್: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮನ್ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸಭೆ ನಡೆಯುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಬಳಿಕ ಕಚೇರಿಯ ಹೊರಗೆ ಇದ್ದ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಗುಂಪುಗಳ ಸದಸ್ಯರು ಒಬ್ಬರ ಮೆಲೋಬ್ಬರು ಕಲ್ಲು ತೂರಾಟ ಸಹ ನಡೆಸಿದ್ದು, ಕಚೇರಿ ಆವರಣದ ಬಳಿ ನಿಲ್ಲಿಸಿದ್ದ ವಾಹನಗಳನ್ನು ಸುಟ್ಟುಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರೆ, ರಾಜ್ಯದ ಆಡಳಿತ ಪಕ್ಷ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ ಮತ್ತು ಇದು ಕೇಸರಿ ಪಕ್ಷದ ಹಳೆಯ ಮತ್ತು ಹೊಸ ಸದಸ್ಯರ ನಡುವಿನ ಸಂಘರ್ಷ ಎಂದು ಹೇಳಿದೆ.
ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದ್ದ ಕಚೇರಿಯಲ್ಲಿ ಇಂದು ಕೇಸರಿ ಪಕ್ಷದ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಎರಡು ಗಂಪುಗಳ ನಡೆವೆ ವಾಗ್ವಾದ ಹಾಗೂ ಮಾರಾಮಾರಿ ನಡೆದಿದ್ದು, ಬಳಕಿ ಕಚೇರಿಯಿಂದ ಹೊರಬಂದ ಒಂದು ಗುಂಪಿನ ಸದಸ್ಯರು ಎರಡು ಮಿನಿ ಟ್ರಕ್ಗಳಿಗೆ ಬೆಂಕಿ ಹಚ್ಚಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
0 التعليقات: