Thursday, 7 January 2021

ಗುಳ್ಳೆಯೊಳಗೆ ಗುಳ್ಳೆ ಬಿಟ್ಟು ನೂತನ ವಿಶ್ವ ದಾಖಲೆ..!


ಗುಳ್ಳೆಯೊಳಗೆ ಗುಳ್ಳೆ ಬಿಟ್ಟು ನೂತನ ವಿಶ್ವ ದಾಖಲೆ..!

ದಿನನಿತ್ಯದ ಜೀವನದಲ್ಲಿ ಮಾಡಬಹುದಾದ ಎಲ್ಲ ರೀತಿಯ ಕೆಲಸದಲ್ಲೂ ಸಹ ವಿಶ್ವ ದಾಖಲೆ ಮಾಡಬಹುದು. ಇತ್ತೀಚಿನ ನಿದರ್ಶನವೊಂದರಲ್ಲಿ, ದೊಡ್ಡ ಗುಳ್ಳೆಯೊಂದರ ಒಳಗೆ ನೂರಾರು ಸಣ್ಣ ಗುಳ್ಳೆಗಳನ್ನು ಊದಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಚಾಂಗ್ ಯು-ಟೇ ಹೆಸರಿನ ಈ ವ್ಯಕ್ತಿ ದೊಡ್ಡ ಗುಳ್ಳೆಯ ಒಳಗೆ 783 ಗುಳ್ಳೆಗಳನ್ನು ಬಿಟ್ಟಿದ್ದಾರೆ. ಇದೇ ವ್ಯಕ್ತಿ ಈ ಹಿಂದೆ ಸೋಪಿನ ಗುಳ್ಳೆಯೊಂದನ್ನು 290 ಬಾರಿ ಬೌನ್ಸ್ ಆಗುವಂತೆ ಮಾಡುವ ಮೂಲಕ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ.

ನಾಲ್ಕು ನಿಮಿಷಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೇಲ್ಕಂಡ ಎರಡೂ ದಾಖಲೆಗಳನ್ನು ನಿರ್ಮಿಸಿದ ಘಟನೆಗಳನ್ನು ನೋಡಬಹುದಾಗಿದೆ.



SHARE THIS

Author:

0 التعليقات: