Wednesday, 27 January 2021

ಕೃಷಿ ಕಾನೂನನ್ನು ವಿರೋಧಿಸಿ ಉತ್ತರಪ್ರದೇಶದ ಬಿಜೆಪಿ ಶಾಸಕ ರಾಜೀನಾಮೆ


ಕೃಷಿ ಕಾನೂನನ್ನು ವಿರೋಧಿಸಿ ಉತ್ತರಪ್ರದೇಶದ ಬಿಜೆಪಿ ಶಾಸಕ ರಾಜೀನಾಮೆ


ಲಕ್ನೋ : ಕಾರ್ಪೋರೇಟ್ ಗಳನ್ನು ಪೋಷಿಸುವ ಕೃಷಿ ಕಾನೂನು ಗಳನ್ನು ವಿರೋಧಿಸಿ ಉತ್ತರಪ್ರದೇಶದ ಬಿಜೆಪಿ ಶಾಸಕ ಅವತಾರ್ ಸಿಂಗ್ ಬದಾನಾ ರಾಜೀನಾಮೆ ನೀಡಿದ್ದಾರೆ. ಮೀರತ್ ಮತ್ತು ಫರಿದಾಬಾದ್‌ನ ಮಾಜಿ ಸಂಸದ ಅವತಾರ್ ಸಿಂಗ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಜಾಫರ್ ನಗರದ ಮಿರಾಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.


ಪಕ್ಷದ ನೀತಿಗಳನ್ನು ವಿರೋಧಿಸಿ ವಿಧಾನಸಭೆ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಬದಾನಾ ಘೋಷಿಸಿದ್ದಾರೆ. ಆದರೆ ರಾಜೀನಾಮೆ ಪತ್ರವನ್ನು ಬಿಜೆಪಿ ಸ್ವೀಕರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.SHARE THIS

Author:

0 التعليقات: