ಸಾರ್ವಜನಿಕರೇ ಎಚ್ಚರ, ಈ ʼಅಪ್ಲಿಕೇಶನ್ʼ ಡೌನ್ಲೋಡ್ ಮಾಡ್ಕೊಳ್ಬೇಡಿ, ಮಾಹಿತಿ ಹಂಚಿ ಮೋಸ ಹೋಗ್ಬೇಡಿ..!
ನವದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಮಹತ್ವದ ಮಾಹಿತಿಯೊಂದನ್ನ ನೀಡಿದ್ದು, Co-WIN ಎನ್ನುವ ಹೆಸರಿನ ಯಾವುದೇ ಮೊಬೈಲ್ ಆಪ್ಲಿಕೇಶನ್ʼಗಳನ್ನ ಡೌನ್ಲೋಡ್ ಮಾಡಿಕೊಳ್ಳಬೇಡಿ ಎಂದು ಎಚ್ಚರಿಸಿದೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವ್ರು, 'CoWIN ಹೆಸರಿನ ಯಾವುದೇ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಅದ್ರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನ ಹಂಚಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಅಧಿಕೃತ ಕೋ-ವಿನ್ ಆಪ್ ಅಲ್ಲ. ಇದೇ ಹೆಸರಿನ ಅನೇಕ ಆಪ್ʼಗಳು ಗೂಗಲ್ ಪ್ಲೇ ಸ್ಟೋರ್ʼನಲ್ಲಿ ಬಂದಿದ್ದು, ನಿಮ್ಮ ವೈಯಕ್ತಿಕ ಮಾಹಿತಿಯನ್ನ ಕೇಳುತ್ತಾರೆ. ಇಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಆಗಿರುವ ಅನೇಕ ಆಯಪ್ʼಗಳಿವೆ. ಇದು ಬಳಕೆದಾರರಿಗೆ ದೊಡ್ಡ ಹಾನಿಯನ್ನ ಉಂಟು ಮಾಡಬಹುದು ಎಂದಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ..!
ವಂಚಕರು ಸ್ಟೋರ್ʼಗಳಲ್ಲಿ CoWIN ಹೆಸರಿನ ಕೆಲವು ಆಪ್ʼಗಳನ್ನ ವಂಚನೆಯ ಅಧಿಕೃತ ಪ್ಲಾಟ್ ಫಾರ್ಮ್ ಮಾಡಿಕೊಂಡಿದ್ದು, ಅದೇ ಹೆಸರಿನಲ್ಲಿ ಹಲವು ಆಪ್ʼಗಳನ್ನ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ. ಅವುಗಳನ್ನು ಡೌನ್ಲೋಡ್ ಮಾಡಬೇಡಿ ಅಥವಾ ಅವುಗಳ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದಿದೆ.
0 التعليقات: