'ರೈತರ ಪರ'ವಾಗಿ ನಾನು ಜೈಲಿಗೆ ಹೋಗಲು ಸಹ ಸಿದ್ಧ - ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕೇಂದ್ರ ಸರ್ಕಾರ ಕಿತ್ತೊಗೆಯಲು ರೈತರ ತೀರ್ಮಾನ ಮಾಡಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಿದೆ. ರೈತರ ವಿರುದ್ಧದ ಕಾಯ್ದೆ ಯಾಕೆ ತಂದಿದ್ದೀರಿ.? 58 ದಿನಗಳಿಂದ ರೈತರು ಪ್ರತಿಭಟನೆ ಮಾಡಿದ್ದಾರೆ. ಚಳಿಯಲ್ಲೇ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಮನುಷ್ಯತ್ವ ಇದ್ರೆ ಹೋರಾಟ ಹತ್ತಿಕ್ಕಬಾರದು. ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿದೆ. ರೈತರ ಬೇಡಿಕೆ ನ್ಯಾಯಯುತವಾಗಿದೆ. ರೈತರ ಪರವಾಗಿ ನಾನು ಜೈಲಿಗೆ ಹೋಗಲು ಸಿದ್ಧ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ರಾಜಭವನ ಮುತ್ತಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನಮ್ಮ ಹೋರಾಟ ರಾಜಭವನಕ್ಕೆ ಮುತ್ತಿಗೆ ಆಗಿದೆ. ನಮ್ಮ ಹೋರಾಟ ಭಾಷಣಕ್ಕೆ ಸೀಮಿತ ಅಲ್ಲ. ರಾಜಭವನಕ್ಕೆ ನಾವು ಮುತ್ತಿಗೆ ಹಾಕುತ್ತೇವೆ. ನಮ್ಮ ಹೋರಾಟ ಈಗ ಪ್ರಾರಂಭ ಆಗಿದೆ. ರೈತರ ಪರವಾಗಿ ಜೈಲಿಗೆ ಹೋಗಲು ಸಹ ಸಿದ್ಧ ಎಂದು ಹೇಳಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು, ಕೃಷಿ ನೀತಿ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ರೈತರು ದಂಗೆ ಏಳಲು ಅವಕಾಶ ಕೊಡಬೇಡಿ. ಕೂಡಲೇ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಿರಿ ಎಂಬುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
0 التعليقات: