Saturday, 16 January 2021

ಕೋವಿಡ್ ಲಸಿಕೆ: ವಿಜ್ಞಾನಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡದ ರಾಹುಲ್ -ಬಿಜೆಪಿ ಮುಖಂಡರ ಕಿಡಿ


ಕೋವಿಡ್ ಲಸಿಕೆ: ವಿಜ್ಞಾನಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡದ ರಾಹುಲ್ -ಬಿಜೆಪಿ ಮುಖಂಡರ ಕಿಡಿ


ನವದೆಹಲಿ: ಕೋವಿಡ್-19 ಲಸಿಕೆ ಬರುವಲ್ಲಿ ಸರ್ಕಾರದ ಪ್ರಯತ್ನಗಳ ಬಗ್ಗೆ ಸದಾ ಅನುಮಾನುಗಳನ್ನು ವ್ಯಕ್ತಪಡಿಸುತ್ತಿದ್ದ ರಾಹುಲ್ ಗಾಂಧಿ, ಲಸಿಕೆ ವಿತರಣೆಯ ಮೊದಲ ದಿನ ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರ ಬಗ್ಗೆ ಯಾವುದೇ ಮೆಚ್ಚುಗೆಯ ಮಾತುಗಳನ್ನಾಡದಿರುವುದಕ್ಕೆ ಬಿಜೆಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಸ್ವದೇಶಿ ನಿರ್ಮಿತ ಎರಡು ಲಸಿಕೆಗಳ ದಕ್ಷತೆ ಮತ್ತು ಸುರಕ್ಷತೆ ಬಗ್ಗೆ ವಿಜ್ಞಾನಿಗಳು ಖಚಿತಪಡಿಸಿದ ನಂತರವೇ ತುರ್ತು ಬಳಕೆಯ ಭರವಸೆ ನೀಡುವುದರೊಂದಿಗೆ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದು, ಸುಳ್ಳು ವದಂತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.


ಕೋವಿಡ್-19 ಲಸಿಕೆ ಬರುವಲ್ಲಿ ಸರ್ಕಾರದ ಪ್ರಯತ್ನಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದ ರಾಹುಲ್ ಗಾಂಧಿ, ದೇಶದಲ್ಲಿ ಬೃಹತ್ ಲಸಿಕೆ ಅಭಿಯಾನ ಪ್ರಾರಂಭಗೊಂಡ ನಂತರ ಒಂದೇ ಒಂದು ಟ್ವೀಟ್ ಮಾಡಿಲ್ಲ, ಭಾರತೀಯ ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರ ಬಗ್ಗೆಯೂ ಮೆಚ್ಚುಗೆಯ ಮಾತನಾಡಿಲ್ಲ ಎಂದು ಬಿಜೆಪಿ ಐಟಿ ಇಲಾಖೆ ಮುಖ್ಯಸ್ಥ ಅಮಿತ್ ಮಾಳವೀಯಾ ಟ್ವೀಟ್ ಮಾಡಿದ್ದಾರೆ.


ಮೋದಿ ಸರ್ಕಾರದ ಕೋವಿಡ್ ನಿರ್ವಹಣೆ ಕುರಿತು ಟೀಕಿಸಿ ಈ ಹಿಂದೆ ರಾಹುಲ್ ಗಾಂಧಿ ಮಾಡಿರುವ ಟ್ವಿಟ್ ಗಳನ್ನು ಅವರು ಫೋಸ್ಟ್ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯರಿಗೂ ಭರವಸೆಯ ದಿನ, ದೇಶಿಯ ಲಸಿಕೆ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಡುತ್ತಿರುವವರು ಸ್ವಯಂ ಅನುಮಾನದ ವಿರುದ್ಧ ಇದೀಗ ಲಸಿಕೆ ಹಾಕಸಿಕೊಳ್ಳಬಹುದು ಎಂದು ಕೇಂದ್ರ ಸಚಿವ ಹರ್ಧೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.



SHARE THIS

Author:

0 التعليقات: