ಏಪ್ರಿಲ್ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲ್ಲ: ಸಿದ್ದರಾಮಯ್ಯ
ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತಿತರೆ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆಯ ಯಾವುದೇ ಸೂಚನೆ ಇಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದಾಗಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಏಪ್ರಿಲ್ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲಾಗುತ್ತದೆ ಎಂದು ಮತ್ತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ಮೈಸೂರು ಭೇಟಿಯ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಯಡಿಯೂರಪ್ಪ ಅವರನ್ನು ಏಪ್ರಿಲ್ ನಂತರ ಸಿಎಂ ಹುದ್ದೆಯಿಂದ ಕೈಬಿಡಲಾಗುತ್ತದೆ ಎಂದರು. "ಯಾವುದೇ ಹಿರಿಯ ನಾಯಕ ಅಥವಾ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಈ ಮಾಹಿತಿ ನೀಡುವುದಿಲ್ಲ ಅವರು ಹಾಗೆ ಮಾಡಿದರೆ, ಸರ್ಕಾರವನ್ನು ಮುನ್ನಡೆಸಲು ಆಗುವುದಿಲ್ಲ . ಆದರೆ ನಾನು ಪಡೆದ ಮಾಹಿತಿಯ ಪ್ರಕಾರ, ನಾಯಕತ್ವ ಬದಲಾವಣೆಯಾಗಲಿದೆ ಮತ್ತು ಏಪ್ರಿಲ್ ನಂತರ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಹೊರಗಿಡಲಾಗುತ್ತದೆ" ಸಿದ್ದರಾಮಯ್ಯ ಹೇಳಿದ್ದಾರೆ.
ಆಪರೇಷನ್ ಕಮಲದಿಂದ ನೂತನವಾಗಿ ಸಚಿವರಾದ ಸಿ ಪಿ ಯೋಗೇಶ್ವರ್ ನೀಡಿದ ಹಣ ಮತ್ತು "ಬ್ಲ್ಯಾಕ್ ಮೇಲ್ ಸಿಡಿ" ಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು. "ಆಪರೇಷನ್ ಕಮಲಕ್ಕೆ ಧನಸಹಾಯ ನೀಡಲು ಯೋಗೇಶ್ವರ್ ಕೋಟ್ಯಂತರ ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಸಚಿವರು (ರಮೇಶ್ ಜಾರಕಿಹೋಳಿ) ಸ್ವತಃ ಒಪ್ಪಿಕೊಂಡಿದ್ದಾರೆ.ಈ ಸಂಬಂಧ ಹೈಕೋರ್ಟ್ನ ನ್ಯಾಯಾಧೀಶರು ನ್ಯಾಯಾಂಗ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ." ಸಿದ್ದರಾಮಯ್ಯ ಆಗ್ತಹಿಸಿದ್ದಾರೆ.
0 التعليقات: