ಹೊಸ ವರ್ಷಾಚರಣೆ ವೇಳೆ ತೋಳದ ಮಾಸ್ಕ್ ಧರಿಸಿ ಬೀದಿಯಲ್ಲಿ ಅಡ್ಡಾಡ್ತಿದ್ದ ವ್ಯಕ್ತಿ ಅರೆಸ್ಟ್!
ಇಸ್ಲಮಾಬಾದ್: ಸದ್ಯ ಪರಿಸ್ಥಿತಿಯಲ್ಲಿ ಮಾಸ್ಕ್ ನಮ್ಮ ಜೀವನ ಅವಿಭಾಜ್ಯ ಅಂಗವಾಗಿದೆ. ಕರೊನಾ ವೈರಸ್ನಿಂದ ತಪ್ಪಿಸಿಕೊಳ್ಳಲು ಇರುವ ಪರಿಣಾಮಕಾರಿ ಸಾಧನಗಳಲ್ಲಿ ಮಾಸ್ಕ್ ಸಹ ಒಂದು. ಮ್ಯಾಚಿಂಗ್ ಸೇರಿದಂತೆ ವಿವಿಧ ರೀತಿಯ ಮಾಸ್ಕ್ಗಳನ್ನು ನೋಡಿದ್ದೇವೆ. ಆದರೆ, ಪಾಕಿಸ್ತಾನದ ಆಸಾಮಿಯೊಬ್ಬ ಧರಿಸಿದ್ದ ಮಾಸ್ಕ್ ಇದೀಗ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಪಾಕಿಸ್ತಾನ ಖೈಬರ್-ಪಖ್ತುನ್ಖ್ವಾ ಪ್ರಾಂತ್ಯದ ಪೇಶಾವರ ಮೂಲದ ವ್ಯಕ್ತಿಯೊಬ್ಬ ಹೊಸ ವರ್ಷದ ಆಚರಣೆಯ ರಾತ್ರಿ ತೋಳದ ಮುಖದ ಮಾದರಿಯ ಮಾಸ್ಕ್ ಧರಿಸಿ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದ ಪ್ರಸಂಗ ಜರುಗಿದೆ.
ಹೊಸ ವರ್ಷಾಚರಣೆಯಂದು ಜನರಲ್ಲಿ ಭಯ ಹುಟ್ಟಿಸಲೆಂದೇ ಮಾಸ್ಕ್ ಧರಿಸಿದ್ದರಿಂದ ಆತನನ್ನು ಪಾಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಫೋಟೋವನ್ನು ಪಾಕಿಸ್ತಾನಿ ಪತ್ರಕರ್ತ ಒಮರ್ ಆರ್ ಖರೇಷಿ ಶೇರ್ ಮಾಡಿಕೊಂಡಿದ್ದು, ಭಾರೀ ವೈರಲ್ ಆಗಿದೆ.
ವಿಚಿತ್ರ ರೀತಿಯ ಮಾಸ್ಕ್ ನೋಡಿದ ನೆಟ್ಟಿಗರು ಇದೀಗ ಜಾಲತಾಣದಲ್ಲಿ ಚರ್ಚೆಗೆ ಇಳಿದಿದ್ದಾರೆ. ಮಾಸ್ಕ್ ನೋಡಲು ತುಂಬಾ ಭಯಾನಕವಾಗಿದೆ ಎಂದು ಕೆಲವರು ಹೇಳಿದರೆ, ತೋಳವನ್ನು ನೋಡಿ ಬಹುಶಃ ಕರೊನಾವೂ ಹತ್ತಿರ ಸುಳಿಯುವುದಿಲ್ಲವೇನೋ ಎಂದು ಇನ್ನು ಕೆಲವರು ನಗೆಚಟಾಕಿ ಹಾಕಿಸಿದ್ದಾರೆ. ಯಾವುದೇ ಮಾಸ್ಕ್ ಧರಿಸಿ ಆದ್ರೆ ಕರೊನಾ ಬಗ್ಗೆ ಎಚ್ಚರಿಕೆ ಇರಲೆಂದು ಅನೇಕರು ಸಲಹೆ ನೀಡಿದ್ದಾರೆ.
0 التعليقات: