ಉತ್ತರಪ್ರದೇಶ: ಗಂಗಾ ನದಿಯಲ್ಲಿ ಕೊಡಲಿಯಿಂದ ಡಾಲ್ಫಿನ್ ಕೊಂದ ಮೂವರನ್ನು ಬಂಧಿಸಿದ ಪೊಲೀಸರು, ವಿಡಿಯೋ!
ಲಖನೌ: ಉತ್ತರಪ್ರದೇಶದ ಪ್ರತಾಪ್ ಘರ್ ನಗರದ ಗಂಗಾ ನದಿಯಲ್ಲಿ ಅಪರೂಪದ ಸಸ್ತನಿ ಜಾತಿಗಳಲ್ಲಿ ಗಂಗೆಟಿಕ್ ಡಾಲ್ಫಿನ್ ಗಳು ಒಂದಾಗಿದ್ದು ಕೆಲ ಯುವಕರು ದಡಕ್ಕೆ ಬಂದಿದ್ದ ಡಾಲ್ಫಿನ್ ವೊಂದನ್ನು ದೊಣ್ಣೆ ಮತ್ತು ಕೊಡಲಿಯಿಂದ ಅಮಾನವೀಯವಾಗಿ ಹೊಡೆದು ಸಾಯಿಸಿದ್ದಾರೆ.
ಈ ಸಂಬಂಧ ಉತ್ತರಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಳೆದ ತಿಂಗಳಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಡಾಲ್ಫಿನ್ ಮೀನಿಗೆ ಯುವಕರು ದೊಣ್ಣೆ ಮತ್ತು ಕೊಡಲಿಯಿಂದ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದೆ.
ಡಿಸೆಂಬರ್ 6ರಂದು ಈ ಘಟನೆ ನಡೆದಿತ್ತು. ಆರೋಪಿಗಳು ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
0 التعليقات: