Sunday, 31 January 2021

ಪ. ಬಂಗಾಳ ಚುನಾವಣೆ ನಡೆಯೋ ಹೊತ್ತಿಗೆ ʼದೀದಿʼ ಒಂಟಿಯಾಗಲಿದ್ದಾರೆ- ಅಮಿತ್ ಶಾ


ಪ. ಬಂಗಾಳ ಚುನಾವಣೆ ನಡೆಯೋ ಹೊತ್ತಿಗೆ ʼದೀದಿʼ ಒಂಟಿಯಾಗಲಿದ್ದಾರೆ- ಅಮಿತ್ ಶಾ


ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಹಾಗೂ ಇತರೆ ಪಾರ್ಟಿಯ ನಾಯಕರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗ್ತಿದ್ದಾರೆ. ಚುನಾವಣೆ ನಡೆಯುವ ಹೊತ್ತಿಗೆ ಮಮತಾ ದೀದಿ ಒಂಟಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.


ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹೌರಾ ಜಿಲ್ಲೆಯ ಜನರನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವರು, ' ಮಮತಾ ಬ್ಯಾನರ್ಜಿ ಪ್ರತಿ ಹಂತದಲ್ಲೂ ಪಶ್ಚಿಮ ಬಂಗಾಳವನ್ನ ಹಿಂದುಳಿಯುವಂತೆ ಮಾಡಿದ್ದಾರೆ. ಕೇಂದ್ರದ ಎಷ್ಟೋ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಿಲ್ಲ. ಈ ರಾಜ್ಯದ ಜನರು ಅವರನ್ನ ಎಂದಿಗೂ ಕ್ಷಮಿಸೋದಿಲ್ಲ' ಎಂದು ಕಿಡಿಕಾರಿದರು.


ಪರೋಕ್ಷವಾಗಿಯೂ ʼಅತ್ಯಾಚಾರ ಸಂತ್ರಸ್ತೆʼಯ ಗುರುತು ಬಹಿರಂಗ ಪಡಿಸ್ಬೇಡಿ: ಮಾಧ್ಯಮಗಳಿಗೆ ʼಬಾಂಬೆ ಹೈಕೋರ್ಟ್ʼ ಸೂಚನೆ


ಇನ್ನು ಮಾತು ಮುಂದುವರೆಸಿದ ಅಮಿತ್‌ ಶಾ, 'ದೀದಿ ರೈತರ ಹೆಸರುಗಳನ್ನಷ್ಟೇ ಕೇಂದ್ರಕ್ಕೆ ನೀಡಿದ್ದಾರೆ. ಆದ್ರೆ, ಅವರ ಅಕೌಂಟ್​ ನಂಬರ್​ಗಳನ್ನ ನೀಡಿಲ್ಲ. ಅಕೌಂಟ್ ನಂಬರ್ ಇಲ್ಲದೇ ರೈತರ ಖಾತೆಗೆ ಹಣ ಹಾಕದಾದ್ರೂ ಹೇಗೆ..? ಅವ್ರು 10 ವರ್ಷಗಳಿಂದ ಇಲ್ಲಿ ಸರ್ಕಾರ ನಡೆಸುತ್ತಿದ್ದು, 10 ವರ್ಷಗಳಲ್ಲಿ ಈ ರಾಜ್ಯದಲ್ಲಾದ ಬದಲಾವಣೆ ಅಂದ್ರೆ ಟಿಎಂಸಿ ನಾಯಕರು ಬಿಜೆಪಿ ಸೇರಿಕೊಂಡಿದ್ದಷ್ಟೇ ಎಂದರು.SHARE THIS

Author:

0 التعليقات: