Wednesday, 6 January 2021

ಇಂಧನ ಬೆಲೆ ಮತ್ತೆ ಹೆಚ್ಚಳ; ದಾಖಲೆ ಏರಿಕೆ ಕಂಡ ಪೆಟ್ರೋಲ್ ದರ

 

ಇಂಧನ ಬೆಲೆ ಮತ್ತೆ ಹೆಚ್ಚಳ; ದಾಖಲೆ ಏರಿಕೆ ಕಂಡ ಪೆಟ್ರೋಲ್ ದರ

ನವದೆಹಲಿ: ತೈಲೋತ್ಪನ್ನಗಳ ದರಗಳು ಮತ್ತೆ ಗಗನದತ್ತ ಮುಖ ಮಾಡಿದ್ದು, ತಿಂಗಳ ಬಳಿಕ ನಿನ್ನೆ ಏರಿಕೆ ಕಂಡಿದ್ದ ಪೆಟ್ರೋಲ್ ದರ ಇಂದು ಮತ್ತೆ ದಾಖಲೆಯ ಏರಿಕೆ ಕಂಡಿದೆ.

ಪೆಟ್ರೋಲ್ ದರದಲ್ಲಿ ಇಂದು ಮತ್ತೆ 23 ಪೈಸೆ ಏರಿಕೆಯಾಗಿದ್ದು. ಆ ಮೂಲಕ ಪೆಟ್ರೋಲ್ ದರ ದೆಹಲಿಯಲ್ಲಿ ಪ್ರತೀ ಲೀಟರ್ ಗೆ ದಾಖಲೆಯ 84.2 ರೂಗೆ ಏರಿಕೆಯಾಗಿದೆ. ಅಂತೆಯೇ ಡೀಸೆಲ್ ದರ ಕೂಡ ಏರಿಕೆಯಾಗಿದ್ದು ಪ್ರತೀ ಲೀಟರ್ ಡೀಸೆಲ್ ದರ 26 ಪೈಸೆ ಹೆಚ್ಚಳವಾಗಿದೆ. ಆ ಮೂಲಕ ದೆಹಲಿಯಲ್ಲಿ ಪ್ರತೀ ಲೀಟರ್ ಡೀಸೆಲ್ ದರ 74.38ಕ್ಕೆ ಏರಿಕೆಯಾಗಿದೆ.

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ದರ 90.83 ಮತ್ತು ಡೀಸೆಲ್ ಲೀಟರ್‌ಗೆ 81.07ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 86.96 ಮತ್ತು ಡೀಸೆಲ್ ಲೀಟರ್‌ಗೆ 79.72ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಇಂದು ಪೆಟ್ರೋಲ್ ಲೀಟರ್‌ಗೆ 85.68 ಕ್ಕೆ ಏರಿಕೆಯಾಗಿದ್ದು, ಡೀಸೆಲ್ 77.97ರೂ ಗೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 87.2ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ 78.86ರೂ ಗೆ ಏರಿಕೆಯಾಗಿದೆ.


SHARE THIS

Author:

0 التعليقات: