Wednesday, 20 January 2021

ಸಮನ್ವಯ ವಿದ್ಯಾಭ್ಯಾಸ ಹಾಗೂ ನವಯುಗದ ಸಾಮಿಪ್ಯ


 ಸಮನ್ವಯ ವಿದ್ಯಾಭ್ಯಾಸ ಹಾಗೂ ನವಯುಗದ ಸಾಮಿಪ್ಯ

ಮನುಷ್ಯರಿಗೂ ಮನುಷ್ಯೇತರ ಜೀವಿಗಳಿಗೂ ಇರುವ ಅತಿ ಪ್ರಮುಖ ವ್ಯತ್ಯಾಸವೆಂದರೆ ಅರಿವು ಮತ್ತು ಅಜ್ಞಾನ. ಅರಿವಿಲ್ಲದಿರುವವ ಮನುಷ್ಯ ರೂಪಿಯಾದರೂ ಪ್ರಾಣಿಯೇ. 'ವಿದ್ಯಾ ಹೀನಂ ಪಶು ಸಮಾನಂ'ಅಂದಿರುವುದು ಅದಕ್ಕೆ. ಇಸ್ಲಾಮಿನ ದೃಷ್ಟಿಯಲ್ಲಂತೂ ಅರಿವಿಲ್ಲದವ ನಿರ್ಜೀವಿ. ಎನ್ನುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರ ವಚನ. ಆದ್ದರಿಂದಲೇ ಅವರ ಕಾಲದಿಂದಲೇ ದೊಡ್ಡ ದೊಡ್ಡ ದರ್ಸ್‌ಗಳಿದ್ದವು. ಹಿರಿಯ ವಿದ್ವಾಂಸರು ಇದ್ದರು.

        ಆದರೆ ಇಂದು ಕಾಲ ಬದಲಾದುದರಿಂದ ಅದು ಯಾವುದು ನಡೆಯುವುದಿಲ್ಲ. ಕಾರಣ ಇಂದಿನ ಕಾಲಘಟ್ಟದ ಯುವ ಜನಾಂಗ ಲೌಕಿಕ ವಿದ್ಯಾಭ್ಯಾಸದ ಕಡೆಗೆ ಮುಖ ತಿರುಗಿಸುತ್ತಾರೆ. ಆದ್ದರಿಂದ ಇಂದು ಮಕ್ಕಳಿಗೆ ಸಂಪೂರ್ಣ ಧಾರ್ಮಿಕ ವಿದ್ಯೆ ಸಿಗುವುದಿಲ್ಲ. ಲೌಕಿಕ ಶಿಕ್ಷಣದ ಸಾವರ್ತಿಕತೆ ಹಾಗೂ ಅನುಕೂಲಗಳು ಇದಕ್ಕೊಂದು ಕಾರಣ. ಇಂದು ಶಾಲಾ ಕಾಲೇಜುಗಳು ಎಲ್ಲಿಯೂ ಲಭ್ಯ. ಒಂದು ಹುದ್ದೆ ದೊರೆಯಬೇಕಾದರೆ ಪದವಿ ಸ್ನಾತಕೋತ್ತರ ಪದವಿಗಳು ಇಂದು ಬೇಕು. ಹಿಂದಿನ ಕಾಲದಲ್ಲಿ ಈ ಆವಶ್ಯಕತೆ ಹಾಗೂ ಅನುಕೂಲ ಇದ್ದಿರಲಿಲ್ಲ. ಆದ್ದರಿಂದ ಪ್ರಾರ್ಥಮಿಕ ಶಾಲಾ ಶಿಕ್ಷಣ ಮುಗಿಸಿ ಧರ್ಮ ವಿದ್ಯೆ ಕಲಿಯಲು ಅಂದು ವಿದ್ಯಾರ್ಥಿಗಳು ಇದ್ದರು.

          ಅದಕ್ಕೆ ಪರಿಹಾರವಾಗಿ ಲೌಕಿಕ ವಿದ್ಯೆಯಿಂದ ಸಂಪೂರ್ಣ ದೂರ ಮಾಡಿ ಮತ ಶಿಕ್ಷಣ ನೀಡುವಿಕೆಯು ಈ ಕಾಲದಲ್ಲಿ ಪ್ರಾಯೋಗಿಕವಲ್ಲ ಎಂದು ಅರಿತುಕೊಂಡು ಧಾರ್ಮಿಕ ಶಿಕ್ಷಣ ರಂಗದಲ್ಲೂ ಕನಿಷ್ಠ ಹೈಯರ್ ಸೆಕೆಂಡರಿ ಮದರಸಗಳನ್ನು ಸ್ಥಾಪಿಸಿದರು. ನಂತರ ನಮ್ಮ ಉಲಮಾಗಳು ಒಂದು ಸೇರಿಕೊಂಡು ಚರ್ಚಿಸಿ ಸಮನ್ವಯ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದರು. ಮರ್ಕಝ್, ಮುಹಿಮ್ಮಾತ್, ಸ‌ಅದಿಯಾ,ಮುಂತಾದ ಸಮನ್ವಯ ಸಂಸ್ಥೆಗಳನ್ನು ಸ್ಥಾಪಿಸಿದರು.  ಅಧ್ಯಾಪನೆ ಮತ್ತು ಬೋಧನೆಯನ್ನು ಮುಖ್ಯ ವೃತ್ತಿಯಾಗಿ ಬಳಿಸಲಿಚ್ಚುವವರನ್ನು ಆ ದಾರಿಗೆ ಬಿಡುವುದು. ಅದಕ್ಕೆ ಯೋಗ್ಯರಲ್ಲದವರನ್ನು ಧಾರ್ಮಿಕ ಶಿಕ್ಷಣದ ಜೊತೆಗೆ ವೃತ್ತಿಗೆ ಅನುಕೂಲವಾಗುವಂತೆ ಅಭ್ಯಾಸ ಮಾಡಿಸುವುದು  ತಲೆಗೆ ಪೇಟ ಕಟ್ಟಿ ಬಿಟ್ಟ ಎಂಬ ಒಂದೇ ಕಾರಣಕ್ಕೆ ಅಧ್ಯಾಪಕ ಬೋಧಕನಾಗಲು ಸಾಧ್ಯವಾಗದವರು ಕೆಲಸವಿಲ್ಲದೆ ಅಲೆದಾಡುವಂತೆ ಆಗಬಾರದು ಎಂಬ ಕಾರಣಕ್ಕಾಗಿದೆ.

        ಮಾತ್ರವಲ್ಲ. ಮುಸ್ಲಿಮರು ಶಿಕ್ಷಣದಲ್ಲಿ ಹಿಂದೆ ಬಿದ್ದಿದ್ದಾರೆ. ಹಳ್ಳಿಯ ಗ್ರಾಮ ಪಂಚಾಯಿತಿ ನಿಂದ ಹಿಡಿದು ದಿಲ್ಲಿಯ ರಾಷ್ಟ್ರಪತಿ ಹುದ್ದೆಯ ತನಕ ನೋಡಿದರೆ ಮುಸ್ಲಿಂ ಪ್ರಾತಿನಿಧ್ಯ ಎಷ್ಟಿದೆ? ಐಎಎಸ್, ಐಪಿಎಸ್, ಶ್ರೇಣಿಯಲ್ಲಿ ಪೊಲೀಸ್ ಇಲಾಖೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ವೈದ್ಯಕೀಯ ರಂಗದಲ್ಲಿ ಎಲ್ಲೇ ಆದರೂ ಮುಸ್ಲಿಮರ ಸಂಖ್ಯೆ ಗರಿಷ್ಠವೆಂದರೂ ನೂರರಲ್ಲಿ ಮೂರಕ್ಕಿಂತ ಮೇಲೆರದು. ಜಾತ್ಯತೀತ ರಾಷ್ಟ್ರದ ರಾಜಕೀಯ ಕ್ಷೇತ್ರ ನೋಡಿ. ಮುಸ್ಲಿಂ ರಾಜಕಾರಣಿಗಳ ಪ್ರಾತಿನಿದ್ಯ ಎಷ್ಟಿದ್ದರೂ ಪಂಚಾಯತ್ ಪುಡಿ  ರಾಜಕೀಯಕ್ಕಷ್ಟೆ ಸೀಮಿತವಾಗಿದೆ. 545 ಸದಸ್ಯರ ಲೋಕಸಭೆಯಲ್ಲಿ ಮುಸ್ಲಿಮರೆಷ್ಟಿದ್ದಾರೆ? ರಾಷ್ಟ್ರದ ಪ್ರಧಾನಮಂತ್ರಿಗಳ ಪಟ್ಟಿಯಲ್ಲಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮುಸ್ಲಿಂ ಹೆಸರು ಒಂದೂ ಇಲ್ಲವಲ್ಲ.....!

         ಉನ್ನತ ಸ್ಥಾನಮಾನಗಳಿಂದ ನಾವೇಕೆ ದೂರವಾಗಿದ್ದೇವೆ? ಶಿಕ್ಷಣದ ಕೊರತೆಯಿಂದ. ಆದ್ದರಿಂದ ನಮ್ಮ ಉಲಮಾ ದಿಗ್ಗಜರು ಭಾರತದಾದ್ಯಂತ ಸಮನ್ವಯ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದರು. ಧಾರ್ಮಿಕ ಕಲಿಕೆಯೊಂದಿಗೆ ಲೌಕಿಕ  ಕಲಿಕೆಯು ಅಲ್ಲಿ ನಡೆಯುತ್ತಿದೆ. ಮುಸ್ಲಿಂ ವಿದ್ಯಾಸಂಸ್ಥೆಗಳು ಉತ್ತಮ ಗುಣಮಟ್ಟದ ಲೋಕ ಶಿಕ್ಷಣವನ್ನು ನೀಡುವುದರ ಜೊತೆಗೆ ಉತ್ತಮ ನೈತಿಕ ಪರಿಸರವನ್ನು ಧಾರ್ಮಿಕ ಬೋಧನೆಯನ್ನು ನೀಡುವುದರ ಕಾರಣ ಇಂದು ಹಲವಾರು ಧಾರ್ಮಿಕ ಬಿರುದಿನೊಂದಿಗೆ ವ್ಯತ್ಯಸ್ತ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಲೌಕಿಕ ಶಿಕ್ಷಣ-ಧಾರ್ಮಿಕ ಶಿಕ್ಷಣವು  ಸಮ್ಮಿಲನವಾಗಿ ಕಲಿಯುವಾಗ ಚಿನ್ನಕ್ಕೆ ಗಂಧ ಲೇಪಿಸುವಂತಹ ಅನುಭವ ನೀಡಬಲ್ಲದು..........

- ಝಾಕೀರ್ ಉರುವಾಲ್ ಪದವು


SHARE THIS

Author:

0 التعليقات: