Sunday, 3 January 2021

ಚಿತ್ರದುರ್ಗ: ಕೇಂದ್ರ ಸಚಿವ ಸದಾನಂದಗೌಡ ಆಸ್ಪತ್ರೆಗೆ ದಾಖಲು!


 ಚಿತ್ರದುರ್ಗ: ಕೇಂದ್ರ ಸಚಿವ ಸದಾನಂದಗೌಡ ಆಸ್ಪತ್ರೆಗೆ ದಾಖಲು!

ಚಿತ್ರದುರ್ಗ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದಾಗ ಸದಾನಂದಗೌಡರ ಆರೋಗ್ಯದಲ್ಲಿ ಏರುಪೇರಾಗಿದೆ. ಚಿತ್ರದುರ್ಗದ ಹೋಟೆಲ್ ರೇಜೆನ್ಸಿಗೆ ಮಧ್ಯಾಹ್ನ ಊಟಕ್ಕೆ ಬಂದಿದ್ದ ಅವರು, ಕಾರಿನಿಂದ ಇಳಿಯುವಾಗ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲೋ ಶುಗರ್ ಸಮಸ್ಯೆಯಿಂದಾಗಿ ಅವರು ಅಸ್ವಸ್ಥರಾಗಿದ್ದಾಗಿ ತಿಳಿದುಬಂದಿದೆ. ಆಸ್ಪತ್ರೆಗೆ ಬಿಜೆಪಿ ಶಾಸಕರು ಹಾಗೂ ಮುಖಂಡರು ಭೇಟಿ ನೀಡಿದ್ದು, ಸದಾನಂದಗೌಡರ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ.


SHARE THIS

Author:

0 التعليقات: