Sunday, 10 January 2021

ಎಸ್.ಎಸ್.ಎಫ್ ಮುಡಿಪು ಸೆಕ್ಟರ್ ವಾರ್ಷಿಕ ಮಹಾಸಭೆ


 ಎಸ್.ಎಸ್.ಎಫ್ ಮುಡಿಪು ಸೆಕ್ಟರ್ ವಾರ್ಷಿಕ ಮಹಾಸಭೆ 

ಮುಡಿಪು :ಎಸ್.ಎಸ್.ಎಫ್ ಮುಡಿಪು ಸೆಕ್ಟರ್ ವಾರ್ಷಿಕ ಮಹಾಸಭೆ ಜನವರಿ 7 ಗುರುವಾರ ರಾತ್ರಿ 7ಗಂಟೆಗೆ ರಾಯಲ್ ಗಾರ್ಡನ್ ಹಾಲ್ ಮಿತ್ತಕೋಡಿ ಯಲ್ಲಿ ನಡೆಯಿತು.ಹುಸೈನ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. MSA ಸಿರಾಜುದ್ದೀನ್ ಅಮ್ಮೆಂಬಳ ಸ್ವಾಗತಿಸಿ, ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.ಕಾರ್ಯಕ್ರಮವನ್ನು ಶರೀಫ್ ಸಅದಿ ಸಾಂಬರ್ ತೋಟ ಉದ್ಘಾಟಿಸಿದರು. ಮುಡಿಪು ಡಿವಿಷನ್ ಅಧ್ಯಕ್ಷರಾದ ಇಬ್ರಾಹಿಂ ಅಹ್ಸನಿ ತರಗತಿ ಮಂಡಿಸಿದರು. ಪದಾಧಿಕಾರಿಗಳ ಕರ್ತವ್ಯದ ಬಗ್ಗೆ ಡಿವಿಷನ್ MOD ಮನ್ಸೂರ್ ಹಿಮಮಿ ಉತ್ತಮ ಮಾಹಿತಿ ನೀಡುತ್ತಾ. ನಂತರ ಪದಾಧಿಕಾರಿಗಳ ಆಯ್ಕೆ ನಡೆಸಿದರು.

ಅಧ್ಯಕ್ಷರಾಗಿ ರಾಫೀಹ್ ಕಣ್ಣೂರ್ (ಜಾರದಗುಡ್ಡೆ), ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನ್ ಕುಕ್ಕುದಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ಇಲ್ಯಾಸ್ ಪಾಣೇಲ  ರವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ..ಜಾಫರ್ ಸಖಾಫಿ ಕುಕ್ಕುದಕಟ್ಟೆ, ಜಬ್ಬರ್ ಬೋಳಿಯಾರ್, ಕಾರ್ಯದರ್ಶಿಗಳಾಗಿ ಶಾಕೀರ್ ಮುಡಿಪು,ಅನೀಸ್ ಸಾಂಬಾರ್ ತೋಟ, ಆಸೀಫ್ ಮುಡಿಪು, ತಂಜೀದ್ ಅಮ್ಮೆಂಬಳ, ಸಿದ್ದೀಕ್ ಸುಬ್ಬಗುಳಿ, ಯಾಸೀನ್ ಮಧ್ಯನಡ್ಕ ಆಯ್ಕೆ ಯಾದರು.


SHARE THIS

Author:

0 التعليقات: