Saturday, 2 January 2021

ಬಾಬರಿ ಮಸ್ಜಿದ್ ಇದ್ದ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ರಾಮ ಮಂದಿರಕ್ಕೆ ಅಡ್ಡಿ| ಭೂಮಿಯೊಳಗೆ ಜಲ ಹರಿವು ಪತ್ತೆ!


 ಬಾಬರಿ ಮಸ್ಜಿದ್ ಇದ್ದ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ರಾಮ ಮಂದಿರಕ್ಕೆ ಅಡ್ಡಿ| ಭೂಮಿಯೊಳಗೆ ಜಲ ಹರಿವು ಪತ್ತೆ!

ನವದೆಹಲಿ(02-01-2021): ಬಾಬರಿ ಮಸ್ಜಿದ್ ಇದ್ದ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿದ್ದ ಮಂದಿರದ ಟ್ರಸ್ಟ್ ಗೆ ಆಘಾತ ಉಂಟಾಗಿದೆ. ಈಗಾಗಲೇ ನೂತನವಾಗಿ ರಚಿಸಿದ ಮಾದರಿಯಲ್ಲಿ ಮಂದಿರ ನಿರ್ಮಾಣ ಸಾಧ್ಯವಿಲ್ಲ ಎನ್ನುವುದು ರಾಮಂದಿರ ಟ್ರಸ್ಟ್ ಮುಖ್ಯಸ್ಥ ನಿರ್ಮೇಂದ್ರ ಮಿಶ್ರ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

2023ರಲ್ಲಿ ರಾಮಮಂದಿರ ಕಾರ್ಯ ಪೂರ್ತಿಗೊಳಿಸುವ ಉದ್ದೇಶವನ್ನು ರಾಮಮಂದಿರ ನಿರ್ಮಾಣ ಟ್ರಸ್ಟ್ ಉದ್ದೇಶಿಸಿತ್ತು. ಕ್ಷೇತ್ರದ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸಿದಾಗ ಭೂಮಿಯೊಳಗೆ ಜಲ ಹರಿವು ಕಂಡುಹಿಡಿದಿದ್ದಾರೆ. ಇದರಿಂದಾಗಿ ಈ ಮೊದಲಿನ ಮಾದರಿಯಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆಂದು ನ್ಯೂಸ್ 18ವರದಿ ಮಾಡಿದೆ.

ಈ ಮೊದಲು ಸಿಬಿಆರ್ ಐ, ಐಐಟಿ ಮದ್ರಾಸ್ ಇಂಜಿನಿಯರ್ ಗಳು ಈ ಪ್ರದೇಶದಲ್ಲಿ ಮಣ್ಣಿನ ಪರೀಕ್ಷೆಯನ್ನು ನಡೆಸಿದ್ದರು. ಆದರೆ ಇದೀಗ ಇಂಜಿನಿಯರ್ ಗಳ ಎಲ್ಲಾ ಊಹೆಗಳನ್ನು ಜಲ ಹರಿವು ತಪ್ಪಾಗಿಸಿದೆ.

ಹಲವು ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಬಾಬರಿ ಮಸೀದಿ ಜಾಗವನ್ನು ಇತ್ತೀಚೆಗೆ ಚೀಪ್ ಜಸ್ಟಿಸ್ ರಂಜನ್ ಗೊಗಯ್ ರಾಮಮಂದಿರಕ್ಕೆ ಟ್ರಸ್ಟ್ ಗೆ ಬಿಟ್ಟುಕೊಟ್ಟು ತೀರ್ಪು ನೀಡಿದ್ದರು. ಬಾಬರಿ ಮಸೀದಿಯನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವಾನಿ, ಮುರಳಿ ಮನೋಹರ ಜೋಶಿ ಸೇರಿ ಇತರ ಆರೋಪಿಗಳನ್ನು ಕೂಡ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೋಶಿ ಎಂದು ಹೇಳಿತ್ತು. ಇದೊಂದು ದೋಷಪೂರಿತ ತೀರ್ಪು ಎಂದು ವ್ಯಾಪಕ ಚರ್ಚೆಗೆ ಕೂಡ ದೇಶದಲ್ಲಿ ಕಾರಣವಾಗಿತ್ತು.


SHARE THIS

Author:

0 التعليقات: