Monday, 11 January 2021

ನಿಲ್ಲಿಸಿದ್ದ ಕಾರನ್ನು ಮಹಿಳೆ ಸಹಿತ ಅಪಹರಿಸಿದ ದರೋಡೆಕೋರರು! ಮುಂದೆ ಆದದ್ದು ಭಯಾನಕ.


 ನಿಲ್ಲಿಸಿದ್ದ ಕಾರನ್ನು ಮಹಿಳೆ ಸಹಿತ ಅಪಹರಿಸಿದ ದರೋಡೆಕೋರರು! ಮುಂದೆ ಆದದ್ದು ಭಯಾನಕ.

ದೇರಾಬಸಿ (ಪಂಜಾಬ್‌): ಪತ್ನಿಯನ್ನು ಕಾರಿನೊಳಕ್ಕೆ ಕುಳ್ಳರಿಸಿ ಪತಿಯೊಬ್ಬರು ಹೊರಕ್ಕೆ ಹೋದ ಸಂದರ್ಭದಲ್ಲಿ ಆ ಮಹಿಳೆ ಸೇರಿದಂತೆ ಕಾರನ್ನೇ ಅಪಹರಿಸಿರುವ ಆಘಾತಕಾರಿ ಘಟನೆ ಪಂಜಾಬ್‌ನ ದೇರಾಬಸಿಯಲ್ಲಿ ನಡೆದಿದೆ.

ರಾಜೀವ್​ ಚಂದ್​ ಮತ್ತು ಸುಖಮನಿ ಎಂಬ ದಂಪತಿ ಇಂಥದ್ದೊಂದು ಭಯಾನಕ ಕೃತ್ಯಕ್ಕೆ ಒಳಗಾದವರು. ದಂಪತಿ ತಮ್ಮ ಮಕ್ಕಳ ಶಾಲಾ ಶುಲ್ಕವನ್ನ ಭರಿಸಲು ಕಾರಿನಲ್ಲಿ ಶಾಲೆಗೆ ಹೋಗಿದ್ದರು. ಅದೇ ವೇಳೆ ರಾಜೀವ್‌ ಅವರು ಮಾತ್ರ ಕೆಳಕ್ಕೆ ಇಳಿದು ಶಾಲೆಯ ಒಳಗೆ ಹೋಗಿದ್ದಾರೆ. ಸುಖಮನಿಯವರು ಕಾರಿನಲ್ಲಿಯೇ ಇದ್ದಾರೆ.

ಇದನ್ನು ಗಮನಿಸುತ್ತಿದ್ದ ದರೋಡೆಕೋರರಿಬ್ಬರು ಕಾರಿನತ್ತ ನುಗ್ಗಿದ್ದಾರೆ. ಕಾರಿನ ಕೀ ಅಲ್ಲಿಯೇ ಇದ್ದುದರಿಂದ ಸುಲಭದಲ್ಲಿ ಕಾರಿನೊಳಕ್ಕೆ ಹೋದ ಅವರು, ಮಹಿಳೆ ಕಿರುಚದಂತೆ ಗಟ್ಟಿಯಾಗಿ ಬಾಯಿಯನ್ನು ಒತ್ತಿಹಿಡಿದಿದ್ದಾರೆ. ಇನ್ನೊಬ್ಬ ಕಳ್ಳ ಕಾರನ್ನು ಚಲಾಯಿಸಿಕೊಂಡು ಹೊರಟೇ ಬಿಟ್ಟಿದ್ದಾನೆ.

ಕ್ಷಣಾರ್ಧದಲ್ಲಿ ಈ ಘಟನೆ ಸಂಭವಿಸಿ ಹೋಗಿದೆ. ಸುಖಮನಿ ಅವರು ಪ್ರಾಣಭಯದಿಂದ ತತ್ತರಿಸಿಹೋಗಿದ್ದರು. ಈ ದರೋಡೆಕೋರರು ಸೇರಿ ತಮಗೆ ಇನ್ನೇನು ಅನಾಹುತ ಮಾಡುತ್ತಾರೆ ಎಂದು ನಲುಗಿ ಹೋಗಿದ್ದರು. ಅದೇ ವೇಳೆ ಸುಮಾರು 5 ಕಿಲೋಮೀಟರ್​ ದೂರದವರೆಗೆ ಕಾರನ್ನು ಕೊಂಡೊಯ್ದ ಕಳ್ಳರು, ಟೋಲ್ ಒಂದರ ಬಳಿ ಸಾಗಿದ್ದಾರೆ.

ಮಹಿಳೆ ಇಲ್ಲಿಯೇ ಇದ್ದರೆ ಅಪಾಯ ಎಂದು ಅರಿತ ಅವರು, ಕಾರಿನಿಂದಲೇ ಅವರನ್ನು ಹೊರಕ್ಕೆ ದಬ್ಬಿಬಿಟ್ಟಿದ್ದಾರೆ. ಆ ದಬ್ಬಿದ ರಭಸಕ್ಕೆ ಸುಖಮನಿಯವರಿಗೆ ತೀವ್ರ ಗಾಯಗಳಾಗಿವೆ. ಆದರೆ ಅವರು ತಮ್ಮ ಪ್ರಾಣ ಮತ್ತು ಮಾನಕ್ಕೆ ಹಾನಿ ಮಾಡಿಲ್ಲ ಎನ್ನುವ ಸಮಾಧಾನ ಈ ದಂಪತಿಯದ್ದು, ಕಾರಿನ ಸಹಿತ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಸಮಾಧಾನ ಈ ದಂಪತಿಯದ್ದು, ಕಾರಿನ ಸಹಿತ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


SHARE THIS

Author:

0 التعليقات: