Saturday, 16 January 2021

ಮೊದಲ ದಿನವೇ 'ಕೊರೊನಾ ಲಸಿಕೆ' ಸಕ್ಸಸ್ ; ನೋ ಸೈಡ್ ಎಫೆಕ್ಟ್.!


ಮೊದಲ ದಿನವೇ 'ಕೊರೊನಾ ಲಸಿಕೆ' ಸಕ್ಸಸ್ ; ನೋ ಸೈಡ್ ಎಫೆಕ್ಟ್.!


ನವದೆಹಲಿ : ಕೊರೊನಾ ಆತಂಕದಲ್ಲಿರುವ ದೇಶದ ಜನತೆಗೆ ಕೊಂಚ ನೆಮ್ಮದಿಯಾದಂತಾಗಿದೆ. ಯೆಸ್, ಅದಕ್ಕೆ ಕಾರಣ ಕೊರೊನಾಗೆ ವ್ಯಾಕ್ಸಿನ್ ಸಿಕ್ಕಿರುವುದು. ಇಂದು ದೇಶದಲ್ಲಿ ಮೊದಲ ದಿನದ ಕೊರೊನಾ ಲಸಿಕೆ ವಿತರಣೆ ಅಂತ್ಯವಾಗಿದೆ. ದೇಶದಲ್ಲಿ 1.65 ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದು, ಯಾವುದೇ ಅಡ್ಡ ಪರಿಣಾಮ ಬೀರಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ.

ದೇಶದ ಒಟ್ಟು 3,351 ಕಡೆಗಳಲ್ಲಿ ಎರಡೂ ವ್ಯಾಕ್ಸಿನ್ ನ್ನು ನೀಡಲಾಗಿದ್ದು, ದೇಶಾದ್ಯಂತ ಒಟ್ಟು 16,755 ಸಿಬ್ಬಂದಿ ವ್ಯಾಕ್ಸಿನ್ ಚುಚ್ಚುಮದ್ದು ನೀಡಿದ್ದಾರೆ. ದೇಶಾದ್ಯಂತ ಒಟ್ಟು 1,65,714 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ. ಸೀರಮ್ ಇನ್ ಸ್ಟಿಟ್ಯೂಟ್ ತಯಾರಿಸಿರುವ ಕೋವಿಶೀಲ್ಡ್ ನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ರವಾನಿಸಲಾಗಿದೆ.

ಅಸ್ಸಾಂನಲ್ಲಿ 65 ಕೇಂದ್ರ ಬಿಹಾರದಲ್ಲಿ 301 ಕೇಂದ್ರ, ದೆಹಲಿಯಲ್ಲಿ 81 ಕೇಂದ್ರ, ಹರಿಯಾಣದಲ್ಲಿ 77 ಕೇಂದ್ರ, ಕರ್ನಾಟಕದಲ್ಲಿ 242 ಕೇಂದ್ರ, ಮಹಾರಾಷ್ಟ್ರದಲ್ಲಿ 285 ಕೇಂದ್ರ, ಒಡಿಸ್ಸಾದಲ್ಲಿ 181 ಕೇಂದ್ರ, ತಮಿಳುನಾಡಿನಲ್ಲಿ 160 ಕೇಂದ್ರ, ತೆಲಂಗಾಣದಲ್ಲಿ 140 ಕೇಂದ್ರ ಹಾಗೂ ರಾಜಸ್ಥಾನದಲ್ಲಿ 167 ಕೇಂದ್ರದಲ್ಲಿ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ. .
SHARE THIS

Author:

0 التعليقات: